ಮಡಿಕೇರಿ, ನ. 23: ಇಲ್ಲಿನ ಖಾಸಗಿ ಹಳೆಯ ಬಸ್ ನಿಲ್ದಾಣ ಬಳಿ 2018ರಲ್ಲಿ ಭೂಕುಸಿತದಿಂದ ಹಾನಿಗೀಡಾಗಿರುವ ಸ್ಥಳದಲ್ಲಿ ತಡೆಗೋಡೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಸ್ಥಳದಲ್ಲಿ ಈಗಾಗಲೇ ನಗರಸಭೆಯಿಂದ ಪ್ರಾಕೃತಿಕ ವಿಕೋಪ ನಿಧಿಯಿಂದ ರೂ. 1.07 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಕೆಲಸ ನಿರ್ವಹಿಸಲಾಗಿತ್ತು.

ಇದೀಗ ರೂ.2.96 ಕೋಟಿ ವೆಚ್ಚದಲ್ಲಿ ಸುಮಾರು 20 ಮೀಟರ್ ವ್ಯಾಪ್ತಿಯ ತಡೆಗೋಡೆ ಕೆಲಸ ಕೈಗೊಳ್ಳಲಾಗಿದೆ ಎಂದು ನಗರಸಭೆ ಆಯುಕ್ತ ರಾಮದಾಸ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ಕಾಮಗಾರಿ ಪೂರೈಸಿದ ಬಳಿಕ ಪ್ರವಾಸಿಗಳ ವೀಕ್ಷಣಾ ತಾಣವಾಗಿ ಮುಂದುವರಿದ ಕೆಲಸಕ್ಕೆ ಯೋಜನೆ ರೂಪಿಸಲಾಗುವುದು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.