ಚೆಟ್ಟಳ್ಳಿ, ನ. 23 : ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಆದೇಶದ ಪ್ರಕಾರ ಚೆಟ್ಟಳ್ಳಿ ಸಮೀಪದ ಪೆÇನ್ನತ್ಮೊಟ್ಟೆ ಮೌನತುಲ್ ಇಸ್ಲಾಂ ಮದರಸದಲ್ಲಿ ಅಗಲಿದ ಸಮಸ್ತ ಉಲಮಾ ಅನು
ಸ್ಮರಣೆ ಹಾಗೂ ಪ್ರಾರ್ಥನಾ ಸಂಗಮ ಮಹಲ್ ಉಪಾಧ್ಯಕ್ಷ ಕುಟ್ಟಿ ಹಸನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸ್ವಾಗತ ಭಾಷಣವನ್ನು ಮಹಲ್ ಕಾರ್ಯದರ್ಶಿ ಮೊಯಿದೀನ್ ಮಾಡಿದರು. ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಅವರ ಜೀವನ ಚರಿತ್ರೆಯ ಬಗ್ಗೆ ಸಹದ್ ಫೈಝಿ ಮಾತನಾಡಿದರು. ಕಾರ್ಯಕ್ರಮದ ಪ್ರಾರ್ಥನಾ ನೇತೃತ್ವನ್ನು ಮಹಲ್ ಖತೀ ಬ್ ಶಾದುಲಿ ಸಖಾಫಿ ನೆರವೇರಿಸಿದರು. ವೇದಿಕೆಯಲ್ಲಿ ಮೊಹಿದೀನ್ ಸಖಾಫಿ, ಜಲಾಲ್ ಮೌಲವಿ ಉಬೈದ್ ಮುಸ್ಲಿಯಾರ್ ರಫೀಕ್ ದಾರಿಮಿ, ಮಹಲ್ ಕಮಿಟಿ ಪ್ರಮುಖ ಸತಾರ್, ಅಶ್ರಫ್, ಊರಿನ ಗಣ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.