ಮಡಿಕೇರಿ, ನ. 23: ಇಲ್ಲಿನ ಶ್ರೀ ಮುತ್ತಪ್ಪ ಹಾಗೂ ಪರಿವಾರ ದೇವರುಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ತಾ. 24 ಹಾಗೂ 25ರಂದು ನಡೆಯಲಿದೆ. ಈ ಪ್ರಯುಕ್ತ ತಾ. 24ರ ಸಂಜೆಯಿಂದ ಧಾರ್ಮಿಕ ಕೈಂಕರ್ಯ ಆರಂಭಗೊಂಡು, ತಾ. 25ರಂದು ಬೆಳಿಗ್ಗೆ 9.30ಕ್ಕೆ ಬ್ರಹ್ಮಕಲ ಶೋತ್ಸವ ಜರುಗಲಿದೆ. ಧಾರ್ಮಿಕ ವಿಧಿಗಳನ್ನು ಕೇರಳದ ಪಯ್ಯನೂರಿನ ಕೆ. ಮುರುಳಿ ಕೃಷ್ಣನ್ ನಂಬೂದರಿ ಹಾಗೂ ಪರಶಿನಿ ಕಡವು ಬ್ಲಾತೂರು ಚಂದ್ರ ಮಡೆಯಚ್ಚನ್ ನೇತೃತ್ವದಲ್ಲಿ ನಡೆಸಿಕೊಡಲಿದ್ದಾರೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.