ಮಡಿಕೇರಿ, ನ. 23: ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ವಿಲೇವಾರಿ ಆಗದೆ ಬಾಕಿ ಉಳಿದಿರುವ ಅಕ್ರಮ-ಸಕ್ರಮ ಸಂಬಂಧಿತ ಅರ್ಜಿಗಳನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡುವಂತೆ ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ತಾಲೂಕು ಕಚೇರಿ ಬಳಿಯ ಶಿಕ್ಷಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಕ್ಷೇತ್ರದ ಮೂರು ಹೋಬಳಿಗಳ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅವರು ಕಡತಗಳ ಪರಾಮಾರ್ಷೆ ಮಾಡಿದರು. ಮುಂದಿನ ಹತ್ತು ದಿನಗಳಲ್ಲಿ ಸಮಿತಿ ಸಭೆ ನಡೆಸ ಲಾಗುವದು, ಸಭೆ ವೇಳೆಗೆ ಕಡತಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸು ವಂತೆ ಸೂಚನೆ ನೀಡಿದರು. ಒಟ್ಟು 4500 ಕಡತಗಳು ವಿಲೇವಾರಿಗೆ ಬಾಕಿ ಇದ್ದು, ಇವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಹೇಳಿದರು. ಸಭೆಯಲ್ಲಿ ನಾಪೆÇೀಕ್ಲು, ಭಾಗಮಂಡಲ, ಸಂಪಾಜೆ ಹೋಬಳಿಯ ವಿವಿಧ 22 ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು, ಅಕ್ರಮ-ಸಮಿತಿ ಸದಸ್ಯರುಗಳು ಭಾಗವಹಿಸಿದ್ದರು.