ಭಾಗಮಂಡಲ, ನ. 23: ಸಮೀಪದ ಚೇರಂಗಾಲದಲ್ಲಿ ನಿನ್ನೆ ತಡರಾತ್ರಿ ವ್ಯಕ್ತಿಯೊಬ್ಬರಿಗೆ ಗುಂಡೇಟು ತಗುಲಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ರಾತ್ರಿ ವೇಳೆ ನಾಯಿಗಳು ಬೊಗಳಿದ್ದರಿಂದ ಚೇರಂಗಾಲದ ನಿವಾಸಿ ಕೋಡಿ ಬಾಲಕೃಷ್ಣ ಎಂಬವರು ತಮ್ಮ ಗದ್ದೆಗೆ ಕಾಡುಪ್ರಾಣಿಗಳು ಬಂದಿರಬಹುದು ಎಂದು ನೋಡುವುದಕ್ಕಾಗಿ ತೆರಳಿದ ಸಂದರ್ಭ ಬಾಲಕೃಷ್ಣ ಅವರ ಬಲಗಾಲಿಗೆ ಗುಂಡೇಟು ತಗುಲಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.