ಶನಿವಾರಸಂತೆ, ನ. 22: ಶನಿವಾರಸಂತೆ ಸುಳುಗಳಲೆ ಕಾಲೋನಿಯ ನಿವಾಸಿ ಕೂಲಿ ಕಾರ್ಮಿಕ ಮಹಿಳೆಗೆ ಮನೆಯಲ್ಲಿ ಗಂಡ ಹಾಗೂ ಅತ್ತೆ ಇವರಿಬ್ಬರು ಕೈ ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಸುಳುಗಳಲೆ ಕಾಲೋನಿಯ ನಿವಾಸಿ ಮಧು ಸುಮಾರು 6 ವರ್ಷಗಳ ಹಿಂದೆ ಸಕಲೇಶಪುರ ತಾಲೂಕಿನ ವಡೂರು ಗ್ರಾಮದ ಚೈತ್ರಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದು, ಇಬ್ಬರು ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದರು. ಆದರೆ, ಅತ್ತೆ ಪಾರ್ವತಿ ಮತ್ತು ಗಂಡ ಮಧು ಪ್ರತಿ ದಿನ ರಾತ್ರಿ ಕುಡಿದು ಬಂದು ಕಿರುಕುಳ ನೀಡುತ್ತಿರುವುದಾಗಿ ಚೈತ್ರಾ ಶನಿವಾರಸಂತೆ ಪೊಲೀಸ್ ಠಾಣೆಗೆ ಪುಕಾರು ನೀಡಿದ್ದಾರೆ.