ಕೂಡಿಗೆ, ನ. 22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ನದಿಯ ಅಂಚಿಗೆ ಅರಣ್ಯ ಇಲಾಖೆ ವತಿಯಿಂದ ಹಾರಂಗಿಯಿಂದ ಕೂಡಿಗೆಯ ಸೈನಿಕ ಶಾಲೆಯವರೆಗೆ ಟೆಂಟಕಲ್ ಸೋಲಾರ್ ವಿದ್ಯುತ್ ತಂತಿಯನ್ನು ಅಳವಡಿಸಲಾಗುತ್ತಿದೆ.
ಹುದುಗೂರು ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ ಸತತವಾಗಿ ಎರಡು ವರ್ಷಗಳಿಂದ ಈ ವ್ಯಾಪ್ತಿಯ ಬೆಳೆಗಳು ಕಾಡಾನೆಗಳ ಪಾಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಎದುರು ಪ್ರತಿಭಟನೆಯ ಮಾಡಲಾಗು ವುದು ಎಂದು ರೈತರು ಎಚ್ಚರಿಕೆ ನೀಡಿದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದರು. ಇದೀಗ ಹಾರಂಗಿಯಿಂದ ಕೂಡಿಗೆಯವರೆಗೆ ಟೆಂಟಕಲ್ ಸೋಲಾರ್ ವಿದ್ಯುತ್ ತಂತಿಯನ್ನು ಅಳವಡಿಸುವ ಕಾರ್ಯಾರಂಭವಾಗಿದೆ. ಈ ಸಂದರ್ಭ ಹುದುಗೂರು ಉಪ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಆಯಾ ವಿಭಾಗದ ರೈತರು ಸೋಲಾರ್ ಅಳವಡಿಸುವ ಕೆಲಸದಲ್ಲಿ ತೊಡಗಿದರು.