ಕೂಡಿಗೆ, ನ. 22: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿಯಿಂದ ಕೂಡುಮಂಗಳೂರು ಗ್ರಾಮದವರೆಗಿನ ರಸ್ತೆಯು ತೀರ ಹಾಳಾಗಿದ್ದು, ಇದರ ಕಾಮಗಾರಿಗೆ ಕಳೆದ ಆರು ತಿಂಗಳ ಹಿಂದೆ ಭೂಮಿ ಪೂಜೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ನೆರವೇರಿಸಿದ್ದರು. ನಂತರ ಸ್ವಲ್ಪ ಪ್ರಮಾಣದ ಕಾಮಗಾರಿ ನಡೆದ್ದು ಸ್ಥಗಿತಗೊಂಡಿತ್ತು.
ಮಳೆಯಿಂದಾಗಿ ಸ್ಥಗಿತಗೊಂಡಿದ ಕಾಮಗಾರಿಯು ಇದೀಗ ಪ್ರಾರಂಭಗೊಂಡಿದೆ. ಹಾರಂಗಿಯಿಂದ ಕೂಡುಮಂಗಳೂರುವರೆಗೆ ಕೆಲ ಭಾಗಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಉಳಿದ ಭಾಗದಲ್ಲಿ ಡಾಂಬರ್ ರಸ್ತೆಯ ಕಾಮಗಾರಿಯು ಪ್ರಾರಂಭವಾಗಿದೆ. ಕಾಮಗಾರಿಯು ರೂ. 60 ಲಕ್ಷ ವೆಚ್ಚದಲ್ಲಿ ಕ್ರಿಯಾ ಯೋಜನೆಯು ಸಿದ್ಧವಾಗಿದ್ದು ಟೆಂಡರ್ ಪ್ರಕ್ರಿಯೆಯು ಮುಗಿದು ಕಾಮಗಾರಿ ಆರಂಭವಾಗಿದೆ.