ಪರೀಕ್ಷೆ ಬರೆದ ಮಧುಮಗಳು
ಮಡಿಕೇರಿ, ನ. 22: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ 26 ಜೂನಿಯರ್ ಅಸಿಸ್ಟೆಂಟ್ ಹುದ್ದೆ ನೇಮಕಾತಿಗಾಗಿ ಇಂದು ಮಡಿಕೇರಿಯಲ್ಲಿ ಲಿಖಿತ ಪರೀಕ್ಷೆ ನಡೆಯಿತು. ಈ ಹಿಂದೆ ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಈ ಪರೀಕ್ಷೆ ನಗರದ ಜೂನಿಯರ್ ಕಾಲೇಜು ಹಾಗೂ ಜನರಲ್ ತಿಮ್ಮಯ್ಯ ಶಾಲೆಯಲ್ಲಿ ನಡೆಯಿತು.
26 ಹುದ್ದೆಗೆ ಒಟ್ಟು 1,340 ಮಂದಿ ಪರೀಕ್ಷೆ ಎದುರಿಸಿರುವುದಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ ತಿಳಿಸಿದ್ದಾರೆ. ಇವರ ಪೈಕಿ ಇಂದು ನಗರದ ಅಶೋಕಪುರದ ಸ್ವಾತಿ ಎಂಬಾಕೆಯ ವಿವಾಹ ಸುಂಟಿಕೊಪ್ಪದ ಸುರೇಶ್ ಎಂಬವರೊಂದಿಗೆ ನಗರದ ಅಂಬೇಡ್ಕರ್ ಭವನದಲ್ಲಿ ನಿಗದಿಯಾಗಿತ್ತು. ಪರೀಕ್ಷೆ ಬರೆಯಬೇಕಿದ್ದ ಈಕೆ ಬೆಳಿಗ್ಗೆಯೇ ಶಾಸ್ತ್ರ ಮುಗಿಸಿಕೊಂಡು ಪರೀಕ್ಷೆ ಎದುರಿಸಿದ್ದು ವಿಶೇಷವಾಗಿತ್ತು.