ಕಣಿವೆ, ನ. 22: ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗ ರನ್ನು ಆಕರ್ಷಿಸುವ ಹಾರಂಗಿ ಹಿನ್ನೀರು ಪ್ರದೇಶದ ಐಷಾರಾಮಿ ರೆಸಾರ್ಟ್‍ಗಳು, ಹೋಮ್‍ಸ್ಟೇಗಳು ಇರುವ ಹೆರೂರಿನಲ್ಲಿ, ಅನಾದಿಕಾಲದ ಬದುಕು ನಡೆಸುತ್ತಿರುವ ಗಿರಿಜನರತ್ತ ಕೊಡಗು ಜಿಲ್ಲಾಡಳಿತ ಏಕೆ ಗಮನಹರಿಸುತ್ತಿಲ್ಲ ಎಂಬುದು ಇಲ್ಲಿ ಯಕ್ಷ ಪ್ರಶ್ನೆ.
ಕನಿಷ್ಟ ಕುಡಿಯುವ ಶುದ್ಧ ನೀರಿಗೂ ಗತಿಯಿಲ್ಲದ ಈ ಹೆರೂರು ಗಿರಿಜನ ನಿವಾಸಿಗಳು, ವಾಸಕ್ಕೆ ಯೋಗ್ಯವಾದ ಸೂರುಗಳೂ ಇಲ್ಲದೇ ಪರಿತಪಿಸುತ್ತಿರುವ ಈ ಅಮಾಯಕ ಜನರನ್ನು ನೋಡಿದವರಿಗೆ ಎಂಥವರಿಗೂ ಮನ ಕಲಕುತ್ತದೆ.
ಕುಶಾಲನಗರ ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಬಸವನಹಳ್ಳಿ ಯಿಂದ ಸುಮಾರು ಎಂಟು ಕಿಮೀ ದೂರದಲ್ಲಿರುವ ಈ ಹೆರೂರು ಗಿರಿಜನ ಹಾಡಿಯ ಮಾರ್ಗವಾಗಿ ಹಾರಂಗಿ ಹಿನ್ನೀರು ಪ್ರದೇಶದವರೆಗೆ ಸರ್ಕಾರ ಸುಮಾರು ರೂ. 9 ಕೋಟಿ ಹಣ ಖರ್ಚು ಮಾಡಿ ರಸ್ತೆಯನ್ನು ಅಭಿವೃದ್ಧಿಪಡಿಸಿದೆ. ಹಸಿರ ಸಿರಿ ಹೊದ್ದ ಸ್ವಾಭಾವಿಕವಾದ ಆನೆಕಾಡು ಕಣಿವೆ, ನ. 22: ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗ ರನ್ನು ಆಕರ್ಷಿಸುವ ಹಾರಂಗಿ ಹಿನ್ನೀರು ಪ್ರದೇಶದ ಐಷಾರಾಮಿ ರೆಸಾರ್ಟ್‍ಗಳು, ಹೋಮ್‍ಸ್ಟೇಗಳು ಇರುವ ಹೆರೂರಿನಲ್ಲಿ, ಅನಾದಿಕಾಲದ ಬದುಕು ನಡೆಸುತ್ತಿರುವ ಗಿರಿಜನರತ್ತ ಕೊಡಗು ಜಿಲ್ಲಾಡಳಿತ ಏಕೆ ಗಮನಹರಿಸುತ್ತಿಲ್ಲ ಎಂಬುದು ಇಲ್ಲಿ ಯಕ್ಷ ಪ್ರಶ್ನೆ.
ಕನಿಷ್ಟ ಕುಡಿಯುವ ಶುದ್ಧ ನೀರಿಗೂ ಗತಿಯಿಲ್ಲದ ಈ ಹೆರೂರು ಗಿರಿಜನ ನಿವಾಸಿಗಳು, ವಾಸಕ್ಕೆ ಯೋಗ್ಯವಾದ ಸೂರುಗಳೂ ಇಲ್ಲದೇ ಪರಿತಪಿಸುತ್ತಿರುವ ಈ ಅಮಾಯಕ ಜನರನ್ನು ನೋಡಿದವರಿಗೆ ಎಂಥವರಿಗೂ ಮನ ಕಲಕುತ್ತದೆ.
ಕುಶಾಲನಗರ ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಬಸವನಹಳ್ಳಿ ಯಿಂದ ಸುಮಾರು ಎಂಟು ಕಿಮೀ ದೂರದಲ್ಲಿರುವ ಈ ಹೆರೂರು ಗಿರಿಜನ ಹಾಡಿಯ ಮಾರ್ಗವಾಗಿ ಹಾರಂಗಿ ಹಿನ್ನೀರು ಪ್ರದೇಶದವರೆಗೆ ಸರ್ಕಾರ ಸುಮಾರು ರೂ. 9 ಕೋಟಿ ಹಣ ಖರ್ಚು ಮಾಡಿ ರಸ್ತೆಯನ್ನು ಅಭಿವೃದ್ಧಿಪಡಿಸಿದೆ. ಹಸಿರ ಸಿರಿ ಹೊದ್ದ ಸ್ವಾಭಾವಿಕವಾದ ಆನೆಕಾಡು ಕುಟುಂಬದ ಮಕ್ಕಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ವಿಚಾರಿಸಿದರೆ, ಯಾವೊಬ್ಬ ಗಿರಿಜನ ನಿವಾಸಿಯ ಮಕ್ಕಳೂ ಕನಿಷ್ಟ ಹತ್ತನೇ ತರಗತಿ ಪಾಸಾಗಿರುವ ಮಕ್ಕಳಿಲ್ಲ. ಸರ್ಕಾರಿ ಹುದ್ದೆಗೆ ಹೋಗಿರುವ ಮಕ್ಕಳಂತೂ ಇಲ್ಲವೇ ಇಲ್ಲ.
ಹಾಗಾದರೆ ಸ್ವಾತಂತ್ರ್ಯ ನಂತರದ ಅಷ್ಟೂ ವರ್ಷಗಳಿಂದ ಈವರೆಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಅರಣ್ಯವಾಸಿಗಳ ಕಲ್ಯಾಣಕ್ಕೆ ರೂಪಿಸಿದ ಯೋಜನೆಗಳು ಏನಾದವು ಎಂಬದೂ ಪ್ರಶ್ನೆಯಾಗಿದೆ. ಈ ಗಿರಿಜನ ವಾಸಿಗಳ ಅಭ್ಯುದಯಕ್ಕಾಗಿ ಸರ್ಕಾರಗಳು ಬಿಡುಗಡೆ ಮಾಡಿರುವ ಕೋಟಿ ಕೋಟಿ ಹಣ ಏನಾದವು ? ಎಂಬ ಪ್ರಶ್ನೆಗೆ ಜಿಲ್ಲಾಡಳಿತ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ...
ಉಪಯೋಗಕ್ಕೆ ಬಾರದ ವಾಟರ್ ಟ್ಯಾಂಕ್
ಈ ಹೆರೂರಿನ ಗಿರಿಜನ ಹಾಡಿಯಲ್ಲಿ ಕಳೆದ ಹತ್ತು ವರ್ಷಗಳ ಹಿಂದೆ ಕುಡಿಯುವ ನೀರು ಪೂರೈಸುವ ಉದ್ದೇಶಕ್ಕೆಂದು ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ವಾಟರ್ ಟ್ಯಾಂಕ್ ಕಟ್ಟಲಾಗಿದೆ. ಆದರೆ ಆ ಟ್ಯಾಂಕ್‍ಗೆ ನೀರನ್ನು ಸರಬರಾಜು ಮಾಡುವ ಕೆಲಸವೇ ಆಗಿಲ್ಲ ಎನ್ನುತ್ತಾರೆ ಹಾಡಿಯ ನಿವಾಸಿಗಳಾದ ಚಂದ್ರು, ದಿಲೀಪ್, ದಿನೇಶ್, ವಿಠಲ ಮೊದಲಾದವರು.
ಕಳೆದ 30 ವರ್ಷಗಳ ಹಿಂದೆ ನಿರ್ಮಿಸಿರುವ ಮನೆಗಳು ಇಂದು ಶಿಥಿಲಾವಸ್ಥೆ ತಲುಪಿದ್ದು ಗಾಳಿ-ಮಳೆಗೆ ಜಾರಿ ಬೀಳುವ ಗೋಡೆಗಳಿಗೆ ಪ್ಲಾಸ್ಟಿಕ್ ಹೊದಿಕೆಗಳನ್ನು ಕಟ್ಟಿ ತಾತ್ಕಾಲಿಕವಾಗಿ ಸೂರು ಮಾಡಿಕೊಂಡಿರುವ ಈ ನಿವಾಸಿಗಳಿಗೆ ಕೊಡಗು ಜಿಲ್ಲಾಡಳಿತ ಕೂಡಲೇ ಸ್ಪಂದಿಸುವ ಕೆಲಸ ಮಾಡಬೇಕಿದೆ.
ಕುಡಿಯುವ ನೀರಿಗೆ ಹಳ್ಳ
ಹಾಡಿಯ ಸುಮಾರು 20 ಕುಟುಂಬಗಳಿಗೆ ಕುಡಿಯುವ ನೀರು ಪೂರೈಕೆಯಾಗದ ಕಾರಣ ಅಲ್ಲಿನ ನಿವಾಸಿಗಳು ಸುಮಾರು 150 ಮೀಟರ್ ದೂರದಲ್ಲಿ ಕಲ್ಲೂರು ಬೆಟ್ಟದಿಂದ ಬರುವ ಸೋರಿಕೆಯ ನೀರಿಗೆ ಹಳ್ಳ ಮಾಡಿ ಅಲ್ಲಿ ಸಂಗ್ರಹವಾಗುವ ನೀರನ್ನು ಮನೆಗೆ ತಂದು ಕುಡಿಯುತ್ತಿದ್ದಾರೆ.
ಇನ್ನು ಇದೇ ಹಾಡಿಯ ವಯಸ್ಸಾದ ಹಿರಿಯ ವ್ಯಕ್ತಿ ಲಕ್ಷ್ಮಣ ಎಂಬವರಿಗೆ ಯಾವುದೇ ಪಿಂಚಣಿ ಹಣ ಬರುತ್ತಿಲ್ಲ. ಪಂಚಾಯಿತಿಯ ಅಧಿಕಾರಿಗಳು ಮಾನವೀಯತೆಯ ದೃಷ್ಟಿಯಿಂದ ಹಾಡಿಯ ನಿವಾಸಿಗಳ ಸರ್ವೆ ನಡೆಸಿ ಸರ್ಕಾರ ನೀಡುವ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡಬೇಕಿದೆ ಎಂದು ಹಾಡಿಯ ನಿವಾಸಿ ದಿಲೀಪ್ ಹೇಳುತ್ತಾರೆ.
ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೇಕೆ ಮಲ್ಲಿಗೆ ಹೂ?
ನಮಗೆ ಚಂದವಾದ ರಸ್ತೆ ಮಾಡಿ ಏನೂ ಪ್ರಯೋಜನ ಹೇಳಿ ? ನಮ್ಮ ಬಳಿ ಏನು ಬೈಕ್ ಗಳು, ಕಾರುಗಳು ಇವೆಯೇ? ನಾವೇನು ಯಾವಾಗಲೂ ಪೇಟೆಗೆ ಹೋಗೋರಾ? ನಮಗೆ ಬೇಕಿರುವುದು ಕುಡಿವ ಶುದ್ಧ ನೀರು, ವಾಸಕ್ಕೆ ಯೋಗ್ಯವಾದ ಸೂರು ಸ್ವಾಮಿ, "ಹೊಟ್ಟೆಗೆ ಹಿಲ್ಲಿಲ್ಲದ ಮೇಲೆ ಜುಟ್ಟಿಗೇಕೆ ಮಲ್ಲಿಗೆ ಹೂ" ಎನ್ನುತ್ತಾರೆ, ಹಾಡಿಯ ನಿವಾಸಿ ಭೋಜಪ್ಪ, ಜಯಮ್ಮ, ವಿಜು ಮೊದಲಾದವರು. ದಿನ ಬೆಳಕಾಯಿತು ಎಂದರೆ ಕೂಲಿ ಹುಡುಕಿ ಹೋಗುವ ನಮಗೆ, ಕೆಲಸ ಮಾಡಿ ಸಾಕಾಗಿ ಸುಸ್ತಾಗಿ ಮನೆಗೆ ಬಂದಾಗ ನೆಮ್ಮದಿಲಿ ನೀರು ಕುಡಿದು ಮಲಗೋ ಹಾಗೆ ಒಂದು ಅನುಕೂಲ ಮಾಡಿದರೆ ಸಾಕು ಎನ್ನುತ್ತಾರೆ ಮೈನಾ ಎಂಬ ಮಹಿಳೆ.
ಇಲ್ಲಿನ ಹಲವು ಮನೆಗಳಲ್ಲಿ ಕರೆಂಟ್ ಸೌಲಭ್ಯವೂ ಇಲ್ಲ. ನಮ್ಮ ಮಕ್ಕಳು ಆಷ್ಟೋ ಇಷ್ಟೋ ಕುಳಿತು ಓದಲು ಕರೆಂಟ್ ವ್ಯವಸ್ಥೆ ಮಾಡಿಕೊಡಿ ಅಂತಾರೆ ನಿವಾಸಿಗಳು.
ಒಟ್ಟಾರೆ ಜಿಲ್ಲೆಯ ಎಲ್ಲಾ ಹಾಡಿಗಳಲ್ಲಿ ವಾಸವಿರುವ ಶ್ರಮಿಕ ಜೀವಿಗಳಾದ ವನವಾಸಿಗಳ ಕತ್ತಲ ಕೂಪದ ಬದುಕಿಗೆ ಜಿಲ್ಲಾಡಳಿತ ಇನ್ನಾದರೂ ಹೊಸ ಬೆಳಕನ್ನು ಮೂಡಿಸು ವುದೋ ಕಾದು ನೋಡಬೇಕಿದೆ.
- ಕೆ.ಎಸ್. ಮೂರ್ತಿ