*ಕೊಡ್ಲಿಪೇಟೆ, ನ. 22: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯಲ್ಲಿ ವಿಶ್ವ ಶೌಚಾಲಯ ದಿನದ ಪ್ರಯುಕ್ತ, ಸಾರ್ವಜನಿಕರಿಗೆ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಮಾತನಾಡಿ, ಪ್ರತಿ ಕುಟುಂಬವೂ ಶೌಚಾಲಯ ಹೊಂದಿರಬೇಕು. ಶೌಚಾಲಯ ನಿರ್ಮಿಸಲು ಪಂಚಾಯತಿಯಿಂದ ಯೋಜನೆಗಳಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದರು.

ಪ್ರಮುಖರಾದ ಮಹಮ್ಮದ್ ಹನೀಫ್ ಬ್ಯಾಡಗೊಟ್ಟ, ಕುಮಾರಸ್ವಾಮಿ ಕ್ಯಾತೆ, ರೂಪೇಶ್ ಬೆಂಬಳೂರು ಅವರುಗಳು ಮಾತನಾಡಿ, ಶೌಚಾಲಯ ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು. ಕಾರ್ಯಕ್ರಮದಲ್ಲಿ ದಯಾನಂದ ಮಲ್ಲಳ್ಳಿ, ದೌಲತ್ ಹುಸೇನ್, ಪಂಚಾಯತಿ ಕಾರ್ಯದರ್ಶಿ ದೇವರಾಜ್, ಗ್ರಂಥಾಲಯ ಮೇಲ್ವಿಚಾರಕ ನಂದೀಶ್, ಪಂಚಾಯಿತಿ ಸಿಬ್ಬಂದಿಗಳಾದ ರಾಜೇಶ್, ರಂಜಿತಾ, ಸಚಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.