ಮಡಿಕೇರಿ, ನ. 22: ಮಡಿಕೇರಿಯ ಡೈರಿ ಫಾರಂ ಬಳಿ ಕಳೆದ ಹಲವಾರು ಸಮಯಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಚರಂಡಿ ಕೆಲಸ ಪ್ರಾರಂಭಿಸಲಾಗಿದೆ. ಈ ವ್ಯಾಪ್ತಿಯ ಮಳೆಗಾಲದ ಸಂದರ್ಭದಲ್ಲಿ ಸೇರಿದಂತೆ ನೀರಿನ ಹರಿವಿನಿಂದ ರಸ್ತೆಗೂ ಧಕ್ಕೆಯಾಗುತ್ತಿದ್ದು, ರಸ್ತೆ ತೀರಾ ಹೀನಾಯ ಸ್ಥಿತಿಯಲ್ಲಿದ್ದು, ಇದಕ್ಕೆ ಆಗ್ರಹಿಸಿ ಇಲ್ಲಿ ಪ್ರತಿಭಟನೆಗಳನ್ನೂ ನಡೆಸಲಾಗಿತ್ತು. ಇದೀಗ ಇಂದಿನಿಂದ ಚರಂಡಿ ಕೆಲಸ ಆರಂಭಗೊಂಡಿದೆ.