ಕೂಡಿಗೆ, ನ.22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವನಹೊಸೂರು ಮಾವಿನಹಳ್ಳ ಮದಲಾಪುರ ಗ್ರಾಮದಲ್ಲಿ ಕಳೆದ ಮೂರು ತಿಂಗಳುಗಳಿಂದ ಸತತವಾಗಿ ಕಾಡಾನೆಗಳು ದಾಳಿಮಾಡಿ ಅನೇಕ ರೈತರ ಬೆಳೆಗಳನ್ನು ತಿಂದು ತುಳಿದು ಹಾಳುಮಾಡಿವೆ. ಅಲ್ಲದೆ ಹಾರಂಗಿ ಕೂಡಿಗೆ, ನ.22: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಕಾಳಿದೇವನಹೊಸೂರು ಮಾವಿನಹಳ್ಳ ಮದಲಾಪುರ ಗ್ರಾಮದಲ್ಲಿ ಕಳೆದ ಮೂರು ತಿಂಗಳುಗಳಿಂದ ಸತತವಾಗಿ ಕಾಡಾನೆಗಳು ದಾಳಿಮಾಡಿ ಅನೇಕ ರೈತರ ಬೆಳೆಗಳನ್ನು ತಿಂದು ತುಳಿದು ಹಾಳುಮಾಡಿವೆ. ಅಲ್ಲದೆ ಹಾರಂಗಿ ಹಾಳುಮಾಡಿ ನಷ್ಟಪಡಿಸುವುದು ಕಂಡುಬರುತ್ತದೆ. ಅಳಿದುಳಿದ ಭತ್ತದ ಬೆಳೆಯನ್ನು ರಕ್ಷಿಸಲು ಈ ಭಾಗದ ರೈತರು ಎಂಟು ಕಡೆಗಳಲ್ಲಿ ಅಟ್ಟಣಿ (ಮರದ ಮೇಲೆ ಮನೆಯ ಮಾದರಿಯಲ್ಲಿ ನಿರ್ಮಾಣ) ತಮ್ಮ ತಮ್ಮ ಜಮೀನಿನಲ್ಲಿ ನಿರ್ಮಾಣ ಮಾಡಿರುವುದು ವಿಶೇಷವಾಗಿ ಕಂಡು ಬರುತ್ತದೆ.ಮರದ ಮೇಲೆ ಕಾಡಾನೆಗಳನ್ನು ಕಾಯಲು ಜೋಳ ಬೆಳೆಯುವ ಪ್ರದೇಶಗಳಲ್ಲಿ ಮಾತ್ರ ಇತ್ತು. ಆದರೆ ಈ ಮೊದಲು ಬಾರಿಗೆ ಹಾರಂಗಿ ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳಯನ್ನು ಕಾಡಾನೆಗಳಿಂದ ರಕ್ಷಿಸಲು ಈ ವ್ಯಾಪ್ತಿಯ ಹುದುಗೂರು ಕಾಳಿದೇವನಹೊಸೂರು ಮದಲಾಪುರ ಮಾವಿನಹಳ್ಳ ಸೀತೆಗದ್ದೆ ವ್ಯಾಪ್ತಿಯಲ್ಲಿ ಆಯಾ ಭಾಗದಲ್ಲಿ ಅಟ್ಟಣಿಗಳನ್ನು ನಿರ್ಮಿಸಿಕೊಂಡು ರಾತ್ರಿಯ ವೇಳೆಯಲ್ಲಿ ಕಾವಲು ಕಾಯುತ್ತಿದ್ದಾರೆ.
ಈ ವ್ಯಾಪ್ತಿಯ ಐದು ಗ್ರಾಮದವರು ಹಾರಂಗಿ ನದಿ ಅಂಚಿನಲ್ಲಿ ಸ್ವತಃ ಗ್ರಾಮಸ್ಥರು ಎರಡು ಲಕ್ಷ ರೂ. ವೆಚ್ಚದಲ್ಲಿ ಸೋಲಾರ್ ವಿದ್ಯುತ್ ತಂತಿಯನ್ನು ಅಳವಡಿಸಿದರೂ ಹಾರಂಗಿ ನದಿ ದಾಟಿಕೊಂಡು ಬರುವ 10ಕ್ಕೂ ಹೆಚ್ಚು ಕಾಡಾನೆಗಳು ಸೋಲಾರ್ ವಿದ್ಯುತ್ ತಂತಿಯನ್ನು ಸಂಪೂರ್ಣವಾಗಿ ಹಾಳುಪಡಿಸಿ ನೇರವಾಗಿ ಭತ್ತದ ಗದ್ದೆಗಳಿಗೆ ನುಗ್ಗುತ್ತಿವೆ. ಈಗಾಗಲೇ ಕಾಡಾನೆಗಳಿಂದ ಹಾಳಾಗಿದ್ದು ಉಳಿದ ಬೆಳೆಯು ಕೊಯ್ಲಿಗೆ ಬಂದಿದ್ದು, ಇದನ್ನಾದರೂ ಉಳಿಸಿದರೆ (ಮೊದಲ ಪುಟದಿಂದ) ವರ್ಷದ ಜೀವನಕ್ಕೆ ಆಗುತ್ತದೆ ಎಂದು ತಮ್ಮ ಜೀವದ ಹಂಗು ತೊರೆದು ರಾತ್ರಿ ವೇಳೆಯಲ್ಲಿ ನಿದ್ದೆ ಬಿಟ್ಟು ಕಾಡಾನೆಗಳನ್ನು ಓಡಿಸಲು ಕಾರ್ಯದಲ್ಲಿ ಇಲ್ಲಿನ ರೈತರ ತೊಡಗಿದ್ದಾರೆ.
ಹೆಸರಿಗೆ ಮಾತ್ರ ಅರಣ್ಯ ಇಲಾಖೆ, ಸಿಬ್ಬಂದಿ ವರ್ಗದವರು ಬರುತ್ತಾರೆ ಹೋಗುತ್ತಾರೆ ಆದರೆ ಕಾಡಾನೆಗಳು ಅವರ ಕಣ್ಣು ತಪ್ಪಿಸಿ ರೈತ ಬೆಳೆಯನ್ನು ದಿನಂಪ್ರತಿ ಹಾಳುಮಾಡುತ್ತಿವೆ ಎಂದು ಈ ಭಾಗದ ನೂರಾರು ರೈತರ ಅಳಲಾಗಿದೆ.