ಮಡಿಕೇರಿ, ನ. 21: ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಕುರಿತು ಕುಶಾಲ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದ ಪಿ.ಎಂ. ಮೋಹನ್ (45) ಕಳೆದ ಐದು ತಿಂಗಳ ಹಿಂದೆ ಯಾವದೋ ಕೆಲಸದ ನಿಮಿತ್ತ ಮೈಸೂರಿಗೆ ಹೋಗಿ ಬರುವದಾಗಿ ತೆರಳಿದ್ದು, ಈ ತನಕ ಹಿಂತಿರುಗಿಲ್ಲ. ಈ ಬಗ್ಗೆ ಅವರ ಸಹೋದರಿ ವೀರಾಜಪೇಟೆಯವರಾದ ಶೋಭ ಇದೀಗ ದೂರು ನೀಡಿದ್ದಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ಕುಶಾಲನಗರ ಠಾಣೆ (274333) ಅಥವಾ ಜಿಲ್ಲಾ ಪೊಲೀಸ್ ಕಚೇರಿ (229100)ಗೆ ತಿಳಿಸಲು ಪ್ರಕಟಣೆ ಕೋರಿದೆ.