ಮಡಿಕೇರಿ, ನ. 21: ತಾ. 23ರಂದು ಮೂರ್ನಾಡು ಗ್ರಾ.ಪಂ. ವ್ಯಾಪ್ತಿಯ ಗ್ರಾಮಸಭೆ ನಡೆಯಲಿದ್ದು, ಗ್ರಾಮಸಭೆ ಮುಗಿದ ನಂತರ ಸಮುದಾಯ ಭವನದಲ್ಲಿ ಪೌತಿ ವಾರಸಾ ಖಾತೆ ಬದಲಾವಣೆಯ ಬಗ್ಗೆ, ಅರ್ಜಿಗಳ ವಿಲೇವಾರಿ ಬಗ್ಗೆ ಆಂದೋಲನ ಹಮ್ಮಿಕೊಳ್ಳಲಾಗಿದೆ.

ರೈತರು ಅರ್ಜಿ, ವಂಶಾವಳಿ ಪಟ್ಟಿ, ಮರಣ ದೃಢೀಕರಣ ಪತ್ರ, ಪಹಣಿ, ಪ್ರಮಾಣಪತ್ರ ದಾಖಲೆಗಳೊಂದಿಗೆ ಹಾಜರಾಗಿ ಪೌತಿ ವಾರಸಾ ಬದಲಾವಣೆ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಕೋರಲಾಗಿದೆ.