ಮಡಿಕೇರಿ, ನ. 21: ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ 2020-21ನೇ ಸಾಲಿನ ವಾರ್ಡ್ ಸಭೆ ತಾ. 24 ರಂದು ಬೆಳಿಗ್ಗೆ 10.30 ಗಂಟೆಗೆ ವಾರ್ಡ್-2 ಅಂದಗೋವೆ, ಕಲ್ಲುಕೋರೆ, ಬೆಳಗ್ಗೆ 11.30 ಗಂಟೆಗೆ ವಾರ್ಡ್-1 ಕಲ್ಲೂರು, ಅಂದಗೋವೆ ಪೈಸಾರಿ ಇವರಿಗೆ ಕಲ್ಲೂರು ಅಂಗನವಾಡಿ, ಮಧ್ಯಾಹ್ನ 2 ಗಂಟೆಗೆ ವಾರ್ಡ್-4 ಕೊಡಗರಹಳ್ಳಿ ಕಾವೇರಿ ಬಡಾವಣೆ, ಕೊಡಗರಹಳ್ಳಿ ಸರ್ಕಲ್ ಕೊಡಗರಹಳ್ಳಿ ಪಂಚಾಯಿತಿ ಕಚೇರಿ, ಮಧ್ಯಾಹ್ನ 3 ಗಂಟೆಗೆ ವಾರ್ಡ್-3 ಕೊಡಗರಹಳ್ಳಿ ಸ್ಕೂಲ್ ಬಾಣೆ ಮತ್ತು ಉಪ್ಪುತೋಡು ಕೊಡಗರಹಳ್ಳಿ ಪಂಚಾಯಿತಿ ಕಚೇರಿಯಲ್ಲಿ ನಡೆಯಲಿದೆ ಎಂದು ಕೊಡಗರಹಳ್ಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
ಗ್ರಾಮ ಸಭೆ
ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ 2020-21ನೇ ಸಾಲಿನ ಗ್ರಾಮ ಸಭೆ ತಾ. 27 ರಂದು ಬೆಳಿಗ್ಗೆ 11 ಗಂಟೆಗೆ ಕೊಡಗರಹಳ್ಳಿ ಸರ್ಕಾರಿ ಮಾದರಿ ಪ್ರೌಢಶಾಲೆ ಸಭಾಂಗಣದಲ್ಲಿ ಗ್ರಾ.ಪಂ. ಆಡಳಿತಾಧಿಕಾರಿ ಕೆ.ಎ. ನೆಹರು ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.