ಮಡಿಕೇರಿ, ನ. 21: ಕಡಗದಾಳು ಗ್ರ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಕಡಗದಾಳು ಮತ್ತು ಇಬ್ನಿವಳವಾಡಿ ಗ್ರಾಮಗಳ 2020-21ನೇ ಸಾಲಿನ ಗ್ರಾಮ ಸಭೆ ಕಡಗದಾಳು ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಸಿ.ಎಂ. ಪ್ರಮೋದ್ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಬಿಸಿಎಂ. ಇಲಾಖೆಯ ಕವಿತ ಅವರ ಉಪಸ್ಥಿತಿಯಲ್ಲಿ ತಾ. 25 ರಂದು ಪೂರ್ವಾಹ್ನ 11 ಗಂಟೆಗೆ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಯಲಿದೆ.