ಭಾಗಮಂಡಲ, ನ. 20: ಭಾಗಮಂಡಲದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಭಾಗಮಂಡಲದ ನಿವಾಸಿ ಶರಣು ಎಂಬವರು ಅಕಾಲಿಕ ಮರಣ ಹೊಂದಿದ್ದು ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಆರ್ಥಿಕ ನೆರವು ನೀಡಲಾಯಿತು. ಶರಣು ಅವರ ಪತ್ನಿ ಕಾವ್ಯ ಅವರಿಗೆ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ರೂ.5000 ಪರಿಹಾರವನ್ನು ವಿತರಿಸಿದರು.ಈ ಸಂದರ್ಭ ಸಂಘದ ಉಪಾಧ್ಯಕ್ಷ ನಂಜುಂಡಪ್ಪ ಕಾರ್ಯನಿರ್ವಹಣಾಧಿಕಾರಿ ಲಲಿತ,ನಿರ್ದೇಶಕರಾದ ಅಯ್ಯಣ್ಣೀರ ದಿನೇಶ್,ಪ್ರಭಾ ಇದ್ದರು.