ನಾಪೆÉÇೀಕ್ಲು, ನ. 20: ನಗರದ ಬೇತು ರಸ್ತೆಯಲ್ಲಿ ಆಟೋ ರಿಕ್ಷಾ ನಿಲುಗಡೆಗೆ ಈಗಾಗಲೇ ಗ್ರಾಮ ಪಂಚಾಯಿತಿ ಮತ್ತು ನಾಪೆÇೀಕ್ಲು ಪೊಲೀಸ್ ಜಾಗ ನಿಗದಿಪಡಿಸಲಾಗಿ ಸುಮಾರು 150 ಮೀಟರ್ ರಸ್ತೆ ಬದಿಯಲ್ಲಿ ಆಟೋರಿಕ್ಷಾ ನಿಲುಗಡೆಗೆ ಅನುಕೂಲ ಮಾಡಿಕೊಡಲಾಗಿತ್ತು. ಆಟೋರಿಕ್ಷಾ ನಿಲುಗಡೆ ಜಾಗದಲ್ಲಿ ಬೇರೆ ವಾಹನಗಳು ನಿಲ್ಲಸಬಾರದೆಂಬ ನಾಮಫಲಕವನ್ನು ಅಳವಡಿಸಲಾಗಿದ್ದರೂ ಆಟೋರಿಕ್ಷಾ ನಿಲುಗಡೆ ಜಾಗದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಿ ಆಟೋ ನಿಲುಗಡೆಗೆ ತಡೆಯಾಗಿದೆ.

ಈ ಹಿಂದೆ ಆಟೋರಿಕ್ಷಾ ನಿಲುಗಡೆ ಜಾಗದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಬಾರದೆಂದು ನಾಪೆÉÇೀಕ್ಲು ಪೊಲೀಸ್ ಠಾಣಾಧಿಕಾರಿ ಕಿರಣ್ ಎಚ್ಚರಿಕೆ ನೀಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಖಾಸಗಿ ವಾಹನ ಮಾಲೀಕರು ನೋ ಪಾರ್ಕಿಂಗ್ ಧಿಕ್ಕರಿಸಿ ವಾಹನಗಳನ್ನು ನಿಲ್ಲಿಸುತ್ತಿದ್ದು, ಆಟೋ ನಿಲುಗಡೆಗೆ ತೊಂದರೆಯುಂಟಾಗುತ್ತಿದೆ ಎಂದು ಆಟೋ ಚಾಲಕರು ದೂರಿದ್ದಾರೆ.