ಮಡಿಕೇರಿ, ನ.20: ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಎಸ್‍ಎಫ್‍ಸಿ ಹಾಗೂ 14ನೇ ಹಣಕಾಸು ಯೋಜನೆಯ ಅನುದಾನದಡಿ ಸುಮಾರು 1 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಶುಕ್ರವಾರ ಚಾಲನೆ ನೀಡಿದರು.

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಬಳಿಯ ರಸ್ತೆಯಿಂದ ಕೇಂದ್ರೀಯ ವಿದ್ಯಾಲಯಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿ ಚರಂಡಿ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಶಾಸಕರು ಮಡಿಕೇರಿ ನಗರದ ಎಲ್ಲಾ ರಸ್ತೆಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕೇಂದ್ರೀಯ ವಿದ್ಯಾಲಯ ಮಾರ್ಗ ರಸ್ತೆ ಬದಿ ಸುಸಜ್ಜಿತ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಮಾಡುವಂತಾಗಬೇಕು. ಸರ್ವಋತು ಮಾದರಿಯಲ್ಲಿ ನಗರದ ರಸ್ತೆಗಳು ಅಭಿವೃದ್ಧಿಯಾಗಬೇಕು ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ಹೇಳಿದರು. ಚರಂಡಿ ನಿರ್ಮಿಸುವಾಗ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಶಾಸಕರು ಹೇಳಿದರು.

ಮಡಿಕೇರಿ ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಮಡಿಕೇರಿ ನಗರದ ರಸ್ತೆ, ಚರಂಡಿ, ತಡೆಗೋಡೆ ನಿರ್ಮಾಣ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ ಎಂದು ಎಂ.ಪಿ.ಅಪ್ಪಚ್ಚುರಂಜನ್ ಅವರು ತಿಳಿಸಿದರು. ಪ್ರಮುಖರಾದ ಕೆ.ಎಸ್.ರಮೇಶ್, ಅನಿತಾ ಪೂವಯ್ಯ, ಸವಿತಾ ರಾಕೇಶ್, ಮಹೇಶ್ ಜೈನಿ, ಬಿ.ಕೆ.ಜಗದೀಶ್, ಅರುಣ್ ಕುಮಾರ್, ಮನು ಮಂಜುನಾಥ್, ಪೂಣಚ್ಚ, ಸತೀಶ್ ಕುಮಾರ್, ವಿಘ್ನೇಶ್, ನವೀನ್ ಪೂಜಾರಿ, ಎಂ.ಕುಮಾರ್, ಪೌರಾಯುಕ್ತ ರಾಮ್‍ದಾಸ್, ನಗರಸಭೆ ಎಇಇ ರಾಜೇಂದ್ರ, ನಾಗರಾಜು, ವನಿತಾ ಇತರರು ಇದ್ದರು.

ಕಾಮಗಾರಿಗಳ ವಿವರ ಇಂತಿದೆ: ಎಸ್.ಎಫ್.ಸಿ. ವಿಶೇಷ ಅನುದಾನದಲ್ಲಿ ರೂ.80 ಲಕ್ಷಗಳ ಅನುದಾನದ ಕಾಮಗಾರಿ (ಚರಂಡಿ ಮತ್ತು ರಸ್ತೆ ಒಳಗೊಂಡಂತೆ) ಮತ್ತು 14ನೇ ಹಣಕಾಸು ಆಯೋಗದ ಸಾಮಾನ್ಯ ಮೂಲ ಅನುದಾನದಲ್ಲಿ 21.80 ಲಕ್ಷ ರೂ.ವೆಚ್ಚದಲ್ಲಿ ಚರಂಡಿ ಕಾಮಗಾರಿ.

ಮಡಿಕೇರಿ ನಗರಸಭಾ ವ್ಯಾಪ್ತಿಯ ಎಫ್‍ಎಂಕೆಎಂಸಿ. ಕಾಲೇಜು ರಸ್ತೆಯಿಂದ ನೂತನ ಕೇಂದ್ರೀಯ ವಿದ್ಯಾಲಯ ಶಾಲೆಗೆ ಹೋಗುವ ರಸ್ತೆಯಲ್ಲಿ ಮತ್ತು ಐ.ಟಿ.ಐ. ಹಿಂಭಾಗದಲ್ಲಿ ಜಗದೀಶ್ ಮನೆಯಿಂದ ಅಪ್ಪಯ್ಯ ಮನೆವರೆಗೆ ಮತ್ತು ದೇಚೂರಿನಲ್ಲಿ ಬೆಳ್ಳಿಯಪ್ಪ ಮನೆ ಹತ್ತಿರ ಚರಂಡಿ ನಿರ್ಮಾಣ ಹಾಗೂ ದೇಚೂರಿನ ಉಷಾ ಮನೆ ಮುಂಭಾಗದ ಚರಂಡಿಗೆ ಕವರ್‍ಸ್ಲ್ಯಾಬ್ ಅಳವಡಿಸುವ 11.80 ಲಕ್ಷ ರೂ. ವೆಚ್ಚದ ಕಾಮಗಾರಿ. 10 ಲಕ್ಷ ರೂ. ವೆಚ್ಚದಲ್ಲಿ ಮಡಿಕೇರಿ ನಗರಸಭಾ ವ್ಯಾಪ್ತಿಯ ಸುಬ್ರಮಣ್ಯನಗರದಲ್ಲಿ ವಿಶ್ವನಾಥ್ ಗಾಣಿಗ ಮನೆಯಿಂದ ದಮಯಂತಿ ಮನೆಯವರೆಗೆ ಮತ್ತು ಓಂಕಾರೇಶ್ವರ ದೇವಸ್ಥಾನ ಹಿಂಭಾಗದ ರಸ್ತೆಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ.

ಮಡಿಕೇರಿ ನಗರಸಭಾ ವ್ಯಾಪ್ತಿಯ ವಿದ್ಯಾನಗರದಲ್ಲಿ ಗಣೇಶ್‍ರವರ ಮನೆ ಹಿಂಭಾಗ 25 ಲಕ್ಷ ರೂ. ನಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ ಕಾಮಗಾರಿ. ಮಡಿಕೇರಿ ನಗರಸಭಾ ವ್ಯಾಪ್ತಿಯ ಭಗವತಿ ವರ್ಕ್‍ಶಾಪ್‍ನಿಂದ-ಕಾನ್ವೆಂಟ್ ಗೊಂಬೆ ಮನೆಯಿಂದ-ಅಭಿಪಾಲ್ಸ್ ಜಂಕ್ಷನವರೆಗೆ ಹಾಗೂ ಕೂರ್ಗ್ ಇಂಟ್‍ರ್‍ನ್ಯಾಷನಲ್ ಹೋಟೆಲ್ ಜಂಕ್ಷನ್‍ನಿಂದ-ಅರುಣ್ ಶೆಟ್ಟಿ ಮನೆಗೆ ಹೋಗುವ ರಸ್ತೆ - ಪಿ.ಡಬ್ಲ್ಯೂಡಿ ವಸತಿಗೃಹ ಮುಂಭಾಗದಿಂದ-ಕಾಲೇಜ್ ರಸ್ತೆ ಸೇರುವವರೆಗೆ 20 ಲಕ್ಷ ರೂ. ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ.

ಮಡಿಕೇರಿ ನಗರಸಭಾ ವ್ಯಾಪ್ತಿಯ ಸುಬ್ರಹ್ಮಣ್ಯನಗರ ಒಳಭಾಗದ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ರೂ.20 ಲಕ್ಷ. ಮಡಿಕೇರಿ ನಗರಸಭಾ ವ್ಯಾಪ್ತಿಯ ಚೈನ್‍ಗೇಟ್‍ನಿಂದ ತುಳಸಿಭವನದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.5 ಲಕ್ಷ. ಮಡಿಕೇರಿ ನಗರಸಭಾ ವ್ಯಾಪ್ತಿಯ ಭಗವತಿ ವರ್ಕ್‍ಶಾಪ್ ಜಂಕ್ಷನ್‍ನಿಂದ ಐ.ಟಿ.ಐ. ಸೇರುವವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.5 ಲಕ್ಷ, ಮಡಿಕೇರಿ ನಗರಸಭಾ ವ್ಯಾಪ್ತಿಯ ಹರಿಹರ ಸರ್ವೀಸ್ ಸ್ಟೇಷನ್‍ನಿಂದ-ಚಾಮರಾಜ ಬಂಗಲೆ- ಚೈನ್‍ಗೇಟ್ ಸೇರುವವರೆಗೆ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ರೂ.5 ಲಕ್ಷ. ಹೀಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಚಾಲನೆ ನೀಡಿದರು.