ಸುಂಟಿಕೊಪ್ಪ, ನ. 20: ಮೋಟಾರ್ ಬೈಕ್ನಲ್ಲಿ ಅಕ್ರಮವಾಗಿ ಮಾದಕ ವಸ್ತು ಗಾಂಜಾದ ಪುಡಿಯನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾದಪಟ್ಟಣ ನಿವಾಸಿಗಳಾದ ವಿಜಯಕುಮಾರ್ ಹಾಗೂ ಕಿರಣ್ ಎಂಬವರು ತಾ.19 ರಂದು ಹೀರೋ ಹೊಂಡ ಮೋಟಾರ್ ಬೈಕ್ನಲ್ಲಿ (ಕೆಎ12 ಆರ್6905) ಕುಶಾಲನಗರ ಕಡೆಯಿಂದ ಸುಂಟಿಕೊಪ್ಪಕ್ಕೆ ಅಕ್ರಮವಾಗಿ ಗಾಂಜಾ ಪುಡಿಯನ್ನು ಮಾರಾಟ ಮಾಡಲು ತರುತ್ತಿದ್ದಾಗ ಖಚಿತ ಮಾಹಿತಿ ಮೇರೆ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಡಿ.ಎಸ್. ಪುನೀತ್ ಮುಖ್ಯಪೇದೆಗಳಾದ ಸತೀಶ್, ಖಾದರ್, ಪೇದೆ ಪುನಿತ್ 7ನೇ ಹೊಸಕೋಟೆ ಮೆಟ್ನಹಳ್ಳ ಬಳಿ ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ, ಸೆÀಕ್ಷನ್ 20(ಬಿ)2(ಎ) ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.