ಕಡಂಗ, ನ. 20: ಇಲ್ಲಿನ ಬದ್ರಿಯಾ ಸುನ್ನಿ ಮದರಸ ಸಭಾಂಗಣದಲ್ಲಿ ಎಸ್ವೈಎಸ್ ಕಡಂಗ ಯೂನಿಟ್ ಅಧ್ಯಕ್ಷ ಸುಲೈಮಾನ್ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಸುನ್ನತ್ ಕಾರ್ಯಕ್ರಮವನ್ನು ಅಬ್ದುಲ್ ರಹ್ಮಾನ್ ಸಅದಿ ಉಸ್ತಾದರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಊರಿನ ಹಾಗೂ ನೆರೆ ಊರಿನ ಸುಮಾರು 15ಕ್ಕೂ ಹೆಚ್ಚು ಮಕ್ಕಳ ಸುನ್ನತ್ ಕಾರ್ಯವನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಇಶಾಬಾ ಕಾರ್ಯದರ್ಶಿ ರಾಝಿಕ್, ಕೋಶಾಧಿಕಾರಿ ರಜಾಕ್ ಸಿ.ಎ., ಸದಸ್ಯರಾದ ರಂಶೀದ್, ರಶೀದ್ ಐಬಿಎಂ, ಹಸೈನಾರ್ ಕೆ.ಜಿ., ಅಬ್ದುಲ್ ಖಾದರ್ ಮತ್ತು ಬದ್ರಿಯಾ ಮಸೀದಿಯ ಉಸ್ತಾದ್ ಅಬ್ಬಾಸ್ ಉಸ್ತಾದ್ ಉಪಸ್ಥಿತರಿದ್ದರು. ಅಬ್ದುಲ್ ಸಲಾಂ ಯು.ಎಂ. ಸ್ವಾಗತಿಸಿ, ವಂದಿಸಿದರು.