ಸಿದ್ದಾಪುರ, ನ. 20: ನೆಲ್ಲಿಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜೆ ನೆರವೇರಿತು. ಶಕ್ತಿ ಕೇಂದ್ರ ಪ್ರಮುಖ ಕೆ. ಬೆಳ್ಳಿಯಪ್ಪ ನೇತೃತ್ವದಲ್ಲಿ ಗೋವುಗಳಿಗೆ ಹಣ್ಣು ಹಂಪಲು ನೀಡಿ, ಆರತಿ ಬೆಳಗುವ ಮೂಲಕ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಬಿಜೆಪಿ ತಾಲೂಕು ಸಮಿತಿ ಸದಸ್ಯ ಮುರಳಿ, ಶಕ್ತಿ ಕೇಂದ್ರ ಸಹ ಪ್ರಮುಖ ಪ್ರಮೋದ್, ನೆಲ್ಲಿಹುದಿಕೇರಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್, ಎಸ್.ಸಿ. ಅಧ್ಯಕ್ಷ ಮಹೇಂದ್ರ, ಯುವ ಮೋರ್ಚಾ ಕಾರ್ಯದರ್ಶಿ ಅನೀಶ್ ಪ್ರಮುಖರಾದ ಪದ್ಮನಾಭ ಇನ್ನಿತರರು ಹಾಜರಿದ್ದರು.