ಮಡಿಕೇರಿ, ನ. 20: ಮಡಿಕೇರಿ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ, ಸಮನ್ವಯ ಶಿಕ್ಷಣ ಕೇಂದ್ರಕ್ಕೆ, ಫಿಸಿಯೋಥೆರಫಿಗಾಗಿ ತಾಲೂಕಿನ ವಿವಿಧ ಶಾಲೆಗಳಿಗೆ ವಿಶೇಷ ಅಗತ್ಯತೆಯುಳ್ಳ ಮಕ್ಕಳು ಬರುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಫಿಸಿಯೋಥೆರಪಿಗಾಗಿ, ಬಿಪಿಟಿ/ಡಿಪಿಟಿ ವಿದ್ಯಾರ್ಹತೆಯುಳ್ಳ ಒಬ್ಬ ಫಿಸಿಯೋಥೆರಫಿಸ್ಟ್ ಅಗತ್ಯವಿದ್ದು, ಮಾಸಿಕ ಗೌರವಧನದ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ದಾಖಲಾತಿಗಳೊಂದಿಗೆ ಅರ್ಜಿಯನ್ನು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮಗ್ರ ಶಿಕ್ಷಣ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ, ಮಡಿಕೇರಿ ತಾಲೂಕು, ಕೊಡಗು ಈ ವಿಳಾಸಕ್ಕೆ ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಅಭಿಯಾನ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ತಿಳಿಸಿದ್ದಾರೆ.