ದೊಡ್ಡತ್ತೂರು ತಂಡ ಪ್ರಥಮ
ಕೂಡಿಗೆ, ನ. 19: ಹಾರಂಗಿಯ ಫ್ರೆಂಡ್‍ಶಿಪ್ ತಂಡದವರು ಆಯೋಜಿಸಿದ್ದ ಪ್ರಥಮ ವರ್ಷದ ಫ್ರೆಂಡ್‍ಶಿಪ್ ಕಪ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಾರಂಗಿ ಗ್ರಾಮದ ಮೈದಾನದಲ್ಲಿ ನಡೆಯಿತು.
ಪ್ರಥಮ ಸ್ಥಾನವನ್ನು ದೊಡ್ಡತ್ತೂರುವಿನ ಬ್ಲೂಸ್ಟಾರ್ ತಂಡ ಪಡೆದುಕೊಂಡಿದೆ. ದ್ವಿತೀಯ ಸ್ಥಾನವನ್ನು ಬಸವೇಶ್ವರ ತಂಡ ದೊಡ್ಡತ್ತೂರು, ತೃತೀಯ ಸ್ಥಾನವನ್ನು ಸಿದ್ದಕ್ ತಂಡ ಚಿಕ್ಕತ್ತೂರು ಪಡೆದುಕೊಂಡಿತು.
ಬಹುಮಾನ ವಿತರಣೆಯನ್ನು ಹಾರಂಗಿ ನೀರಾವರಿ ಇಲಾಖೆಯ ಇಂಜಿನಿಯರ್ ನಾಗರಾಜ್ ನೆರವೇರಿಸಿದರು. ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಭಾಸ್ಕರ್ ನಾಯಕ, ಇಂಜಿನಿಯರ್ ಕಿರಣ್, ಕುಶಾಲನಗರ ಗ್ರಾಮಾಂತರ ಠಾಣೆಯ ಪೆÇಲೀಸ್ ಪೇದೆ ಸುರೇಶ್ ಸೇರಿದಂತೆ ಗ್ರಾಮದ ಪ್ರಮುಖರಾದ ದೇವರಾಜು, ಪ್ರಕಾಶ್, ಪ್ರಜ್ವಲ್, ದೇವನ್, ಶಿವರಾಜು ಹಾಗೂ ಇತರರು ಹಾಜರಿದ್ದರು.