ಕುಶಾಲನಗರ, ನ. 19: ಕುಶಾಲನಗರ ಕೋಣಮಾರಿಯಮ್ಮ ದೇವಾಲಯದ ವಾರ್ಷಿಕ ಹಬ್ಬಕ್ಕೆ ಸೋಮವಾರ ಚಾಲನೆ ನೀಡಲಾಯಿತು. ವಾರ್ಷಿಕೋತ್ಸವ ಅಂಗವಾಗಿ ಕಾವೇರಿ ನದಿಯಿಂದ ಗಂಗಾಜಲವನ್ನು ಕಲಶಗಳ ಮೂಲಕ ತಂದು ದೇವಾಲಯದ ಆವರಣದಲ್ಲಿರುವ ಮೂಲಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಎರಡು ದಿನಗಳ ಕಾಲ ನಡೆಯಲಿರುವ ಪೂಜಾ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಭಕ್ತಾದಿಗಳು ಬೆಳಗಿನಿಂದಲೇ ಬಂದು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡುಬಂತು. ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್, ಉಪಾಧ್ಯಕ್ಷ ರಾಜು, ಖಜಾಂಚಿ ಲೋಕೇಶ್, ಕಾರ್ಯದರ್ಶಿ ಎಂ.ಎಸ್. ಕುಮಾರ್, ಮಾಜಿ ಅಧ್ಯಕ್ಷ ಶಿವಾನಂದ್, ಚೆಲುವರಾಜು, ಪ.ಪಂ. ಅಧ್ಯಕ್ಷ ಜಯವರ್ಧನ್, ಸದಸ್ಯ ಎಂ.ಬಿ. ಸುರೇಶ್, ಪ್ರಮುಖರಾದ ಧನರಾಜ್, ಪಿ.ಎನ್. ಸುರೇಶ್ ಮತ್ತಿತರರು ಇದ್ದರು.