ಗೋಣಿಕೊಪ್ಪಲು, ನ.19 : ಪೊನ್ನಂಪೇಟೆ ನೂತನ ತಾಲೂಕಿನ ಹೆಚ್ಚುವರಿ ತಹಶೀಲ್ದಾರರಾಗಿ ನೇಮಕವಾಗಿರುವ ಎ.ಎ.ಕುಸುಮರವರು ಗುರುವಾರ ಬೆಳಿಗ್ಗೆ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಪೊನ್ನಂಪೇಟೆ ನಾಗರಿಕ ವೇದಿಕೆಯ ಅಧ್ಯಕ್ಷರು, ಸದಸ್ಯರು ಜಿ.ಪಂ.ತಾ.ಪಂ. ಗ್ರಾ.ಪಂಚಾಯ್ತಿಯ ಜನಪ್ರತಿನಿಧಿಗಳು ನೂತನ ಅಧಿಕಾರಿಯನ್ನು ಹೂಗುಚ್ಚ ನೀಡಿ ಬರಮಾಡಿಕೊಂಡರು. ನಂತರ ನೂತನ ತಹಶೀಲ್ದಾರರ ಕೊಠಡಿಯಲ್ಲಿ ನಿಗದಿಯಾಗಿದ್ದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ನಂತರ ಕಂದಾಯ ಇಲಾಖೆಯ ನೌಕರರೊಂದಿಗೆ ವಿಚಾರ ವಿನಿಮಯ ನಡೆಸಿದ ನೂತನ ತಹಶೀಲ್ದಾರ್ ಕುಸುಮ ಅವರು ಸಮೀಪದಲ್ಲಿರುವ ನಾಡುಕಚೇರಿಗೆ ಭೇಟಿ ನೀಡಿ ಇಲ್ಲಿಯ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿದರು. ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು ನೂತನ ತಾಲೂಕಿನ ಆಡಳಿತ ವ್ಯವಸ್ಥೆ ಚುರುಕುಗೊಳಿಸಲು ಸರ್ಕಾರ ಮಟ್ಟದಲ್ಲಿ ಪೊನ್ನಂಪೇಟೆ ನೂತನ ತಾಲೂಕಿಗೆ ಹೆಚ್ಚುವರಿಯಾಗಿ ತಹಶೀಲ್ದಾರ್
(ಮೊದಲ ಪುಟದಿಂದ) ಹುದ್ದೆಯನ್ನು ನೇಮಕಗೊಳಿಸಿ ಆದೇಶ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದ್ದೇನೆ. ವಾರದ ಮೂರು ದಿನಗಳು ಕಚೇರಿಯಲ್ಲಿ ಖುದ್ದು ಹಾಜರಿರುತ್ತೇನೆ. ಉಳಿದ ಮೂರು ದಿನಗಳು ಚುನಾವಣಾಧಿಕಾರಿಯಾಗಿ ಮಡಿಕೇರಿಯಲ್ಲಿ ಕಾರ್ಯ ನಿರ್ವಹಿಸುತ್ತೇನೆ.ನೂತನ ತಾಲೂಕಿಗೆ ಬೇಕಾದ ಮುಂದಿನ ಕಾರ್ಯಕ್ರಮಗಳ ವಿವರಗಳನ್ನು ಅಧಿಕಾರಿಗಳಿಗೆ, ಸರ್ಕಾರಕ್ಕೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವದಾಗಿ ಭರವಸೆ ನೀಡಿದರು.
ನಾಗರಿಕ ಸಮಿತಿಯ ಉಪಾಧ್ಯಕ್ಷರಾದ ಸಿ.ಕೆ.ಸೋಮಯ್ಯ ಮಾತನಾಡಿ ಈ ನಾಡಿನ ಸಮಸ್ತ ಜನರ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದಾಗಿ ನೂತನ ತಾಲೂಕಿಗೆ ತಹಶೀಲ್ದಾರರಾಗಿ ಅಧಿಕಾರಿ ಆಗಮಿಸಿದ್ದಾರೆ. ಉಳಿದ ಕೆಲಸ ಕಾರ್ಯಗಳು ಸುಗಮಗೊಳಿಸಲು ಇದರಿಂದ ಅನುಕೂಲವಾಗಲಿದೆ. ನೂತನ ತಾಲೂಕಿನ ಪ್ರಯೋಜನ ಆದಷ್ಟು ಬೇಗನೇ ಈ ನಾಡಿನ ಜನತೆಗೆ ಸಿಗಬೇಕೆಂಬುದೇ ನಾಗರಿಕ ಹೋರಾಟ ಸಮಿತಿಯ ಬಹುದಿನಗಳ ಕನಸಾಗಿದೆ ಎಂದರು.
ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಪಿ.ಬಿ.ಪೂಣಚ್ಚ, ಉಪಾಧ್ಯಕ್ಷÀ ಸಿ.ಕೆ.ಸೋಮಯ್ಯ, ಗೌರವ ಕಾರ್ಯದರ್ಶಿಗಳಾದ ವಿ.ಎ.ಸೆಲ್ವರಾಜ್, ನಿರ್ದೇಶಕರುಗಳಾದ ಎಂ.ಎಸ್.ಕುಶಾಲಪ್ಪ, ಕೆ.ಎಂ.ಗಣಪತಿ, ಕೆ.ಸಿ.ಲಾಲಾಪ್ಪ, ಪಿ.ಬಿ.ಪ್ರಭಾಕರ, ಎ.ಎ.ಎರ್ಮುಹಾಜಿ, ರೇಖಾ ಶ್ರೀಧರ್, ಕಾನೂನು ಸಲಹೆಗಾರರಾದ ಎಂ.ಪಿ.ಅಪ್ಪಚ್ಚು, ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀಜಾಸಾಜಿ ಅಚ್ಚುತ್ತನ್, ತಾಲೂಕು ಪಂಚಾಯ್ತಿ ಸದಸ್ಯರಾದ ಮೂಕಳೇರ ಆಶಾ,ಗ್ರಾಮ ಪಂಚಾಯ್ತಿ ಸದಸ್ಯರಾದ ಅಮ್ಮತ್ತೀರ ಸುರೇಶ್,ಮೂಕಳೇರ ಲಕ್ಷ್ಮಣ್, ರೆವೆನ್ಯೂ ಅಧಿಕಾರಿ ಮಂಜುನಾಥ್, ಯಶ್ವಂತ್, ಎಪಿಸಿಎಂಎಸ್ ಅಧ್ಯಕ್ಷರಾದ ಮುದ್ದಿಯದ ಮಂಜು, ದಾನಿಗಳಾದ ಕಾಕಮಾಡ ಅರ್ಜುನ ಮತ್ತಿತರರು ಹಾಜರಿದ್ದರು.
ತಾಲೂಕು ರಚನೆಯ ಹಿಂದೆ ನಾಗರಿಕ ಹೋರಾಟ ಸಮಿತಿಯ ಸಾಕಷ್ಟು ಪ್ರಯತ್ನವಿದ್ದು, ಕಟ್ಟಡ ಹಾಗೂ ಕಚೇರಿ ವ್ಯವಸ್ಥೆಗೂ ಸಾಕಷ್ಟು ಕೊಡುಗೆ ನೀಡಿರುವದನ್ನು ಸ್ಮರಿಸಬಹುದು.
-ಹೆಚ್.ಕೆ.ಜಗದೀಶ್