ವೀರಾಜಪೇಟೆ ವರದಿ, ನ. 19: ಕಾರ್ಯಕರ್ತರು ಪದವಿಗಾಗಿ ಆಸೆ ಪಡದೇ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡು ಮುಂದುವರೆದಲ್ಲಿ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಪಕ್ಷವು ಗೌರವಾಧರಗಳನ್ನು ನೀಡುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ ಮಂಜುನಾಥ್ ಅವರು ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.

ವೀರಾಜಪೇಟೆ ಬ್ಲಾಕ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಕೊಟ್ಟೋಳಿ ಗ್ರಾಮದಲ್ಲಿ ಅಯೋಜಿಸಲಾದ ಕೆದಮುಳ್ಳೂರು ವಲಯದ ಅಲ್ಪಸಂಖ್ಯಾತ ಘಟಕದ ನೂತನ ಸಮಿತಿ ಅಧಿಕಾರ ಸ್ವೀಕಾರ ಸಮಾರಂಭ ನಡೆಯಿತು. ಕಾಂಗ್ರೆಸ್ ಪಕ್ಷವನ್ನು ಅಲ್ಪಸಂಖ್ಯಾತರ ಪಕ್ಷವೆಂದು ಹೇಳುತ್ತಾರೆ. ಇತಿಹಾಸದ ಪುಟದಲ್ಲಿ ಉಲ್ಲೇಖವಾದಂತೆ ಎಲ್ಲಾ ಧರ್ಮವು ಒಂದು ಎಂಬ ಭಾವನೆಯಿಂದ ಉದಯವಾದ ಪಕ್ಷವಾಗಿದೆ. ನಮ್ಮದು ಒಲೈಕೆಯ ಪಕ್ಷವಲ್ಲ. ಒಗ್ಗಟಿನ ಮಂತ್ರದ ಮೂಲಕ ಸಂಘಟಿತವಾದ ಪಕ್ಷವಾಗಿದೆ ಎಂದು ಮಂಜುನಾಥ್ ಹೇಳಿದರು.

ವೀರಾಜಪೇಟೆ ತಾಲೂಕು ಪಂಚಾಯಿತಿಯ ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ ಅವರು ಮಾತನಾಡಿ, ಕೆಲವರು ಟಿಕೇಟ್ ದೊರಕಲಿಲ್ಲಾ ಎಂಬಾ ವೇಧನೆಯಿಂದ ವಿರೋಧಿ ಬಣಗಳೊಂದಿಗೆ ಹೊಂದಾಣಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ವಿ.ಎ. ಉಸ್ಮಾನ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ರಾಜ್ಯ ಕಿಸನ್ ಘಟಕದ ಕಾರ್ಯದÀರ್ಶಿ ಗೋಪಾಲ್ ಕೃಷ್ಣ, ಹಿರಿಯರಾದ ಅಬ್ಬಾಸ್ ಆಲಿ. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ರಫೀಕ್ ಕೊಲುಮಂಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಲಯ ಅಧ್ಯಕ್ಷ ನಡಿಕೇರಿಯಂಡ ಮಹೇಶ್, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಎಂ.ವೈ. ಆಲಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಸಲಾಂ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ಹನೀಫಾ, ಸುಬ್ಬಯ್ಯ, ಉಪಸ್ಥಿತರಿದ್ದರು. ಸ್ವಾಗತ ಮತ್ತು ನಿರೂಪಣೆಯನ್ನು ಎಂ.ಎ. ಇಸ್ಮಾಯಿಲ್, ವಂದರ್ನಾಪಣೆಯನ್ನು ಉಬೈದು ಮಾಡಿದರು. ಸಭೆಯಲ್ಲಿ ಗುಂಡಿಕೇರೆ, ಕೊಟ್ಟೋಳಿ ಮತ್ತು ಕೆದಮುಳ್ಳೂರು ಗ್ರಾಮದ ಪಕ್ಷದ ಕಾರ್ಯಕರ್ತರು ಹಾಜರಿದ್ದರು.