ಕುಶಾಲನಗರ, ನ. 19: ಜಿಲ್ಲೆಗೆ ತನ್ನ ಸ್ನೇಹಿತರೊಂದಿಗೆ ಬೈಕ್ ನಲ್ಲಿ ಪ್ರವಾಸ ತೆರಳುವ ಸಂದರ್ಭ ಖ್ಯಾತ ಚಿತ್ರನಟ ದರ್ಶನ್ ದಾರಿ ಮಧ್ಯೆ ಕುಶಾಲನಗರದಲ್ಲಿ ವೃದ್ಧ ದಂಪತಿಗಳ ಮನೆಗೆ ಭೇಟಿ ನೀಡಿ ಅವರುಗಳ ಆರೋಗ್ಯ ವಿಚಾರಿಸಿದ್ದಾರೆ.

ಬೆಂಗಳೂರಿನಿಂದ ತನ್ನ ಸ್ನೇಹಿತರೊಂದಿಗೆ ಮಡಿಕೇರಿಗೆ ಜಾಲಿ ರೈಡ್‍ಗೆ ತೆರಳಿ ವಾಪಾಸಾಗುವ ಸಂದರ್ಭ ಬೈಚನಹಳ್ಳಿ ಬಳಿ ಹೆದ್ದಾರಿಯಲ್ಲಿ ವಿರಾಮಕ್ಕೆಂದು ಬೈಕ್ ನಿಲ್ಲಿಸಿದಾಗ ನಟನನ್ನು ಗಮನಿಸಿದ ಸ್ಥಳೀಯರಾದ ರಾಧಾ ಎಂಬವರು ಮನೆಗೆ ಆಹ್ವಾನಿಸಿದ್ದಾರೆ. ಹಾಗಾಗಿ ದರ್ಶನ್ ಮನೆಗೆ ಭೇಟಿ ನೀಡಿದರು ಎನ್ನಲಾಗಿದೆ.