ಪೊನ್ನಂಪೇಟೆ, ನ. 19: ವಿಘ್ನೇಶ್ವರ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ಅಜ್ಜಿಕುಟ್ಟೀರ ಪಿ. ಪೊನ್ನಪ್ಪ, ಉಪಾಧ್ಯಕ್ಷರಾಗಿ ಬಿ.ಎಸ್. ರಾಜ (ಚಂದ್ರಶೇಖರ್), ಕಾರ್ಯದರ್ಶಿಯಾಗಿ ಕರ್ತಮಾಡ ಕೆ. ಅಶ್ವಥ್, ಖಜಾಂಚಿಯಾಗಿ ಗುಮ್ಮಟ್ಟೀರ ನಾಣಯ್ಯ, ಗೌರವ ಕಾರ್ಯದರ್ಶಿಯಾಗಿ ಮಲಚೀರ ಸಿ. ತಮ್ಮಯ್ಯ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ವತಿಯಿಂದ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು.