ಶನಿವಾರಸಂತೆ, ನ. 19: ಶನಿವಾರಸಂತೆ ರೋಟರಿ ಕ್ಲಬ್, ಸೋಮವಾರಪೇಟೆ ಪಶುಪಾಲನಾ ಇಲಾಖೆ ಮತ್ತು ಹಂಡ್ಲಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಗುಡುಗಳಲೆ ಜಾತ್ರಾ ಮೈದಾನದಲ್ಲಿ 4ನೇ ವರ್ಷದ ಸಾಕು ನಾಯಿಗಳಿಗೆ ಮತ್ತು ಬೆಕ್ಕುಗಳಿಗೆ ಉಚಿತ ರೇಬಿಸ್ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಲಸಿಕಾ ಶಿಬಿರದ ಉದ್ಘಾಟನೆಯನ್ನು ಮಡಿಕೇರಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಸುರೇಶ್ ಭಟ್ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷ ಹೆಚ್.ವಿ. ದಿವಾಕರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ. ಎಸ್.ವಿ. ಬದಾಮಿ, ಸೋಮವಾರಪೇಟೆ ಮುಖ್ಯ ಪಶು ವೈದ್ಯಾಧಿಕಾರಿ (ವಿಸ್ತರಣೆ) ಡಾ. ಕೆ. ನಾಗರಾಜ್, ಶನಿವಾರಸಂತೆ ಪಶು ವೈದ್ಯಾಧಿಕಾರಿ ಡಾ. ಸತೀಶ್ಕುಮಾರ್ ಮತ್ತು ಸಿಬ್ಬಂದಿಗಳು, ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಸುಮಾರು 500 ಸಾಕು ನಾಯಿಗಳಿಗೆ ಶಿಬಿರದಲ್ಲಿ ಉಚಿತ ಲಸಿಕೆ ನೀಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಎ.ಡಿ. ಮೋಹನ್ಕುಮಾರ್, ಕ್ಲಬ್ ಪ್ರಮುಖರಾದ ಅರವಿಂದ್, ಟಿ.ಆರ್. ಪುರುಷೋತ್ತಮ್, ರವಿ ಇತರ ಸದಸ್ಯರು ಹಾಜರಿದ್ದರು.