ನಾಪೆÇೀಕ್ಲು, ನ. 18: ಕೊಡಗು ಜಿಲ್ಲೆಯಲ್ಲಿ ಹಿರಿಯರು ಕಟ್ಟಿ ಬೆಳೆಸಿದ ಸಹಕಾರ ಕ್ಷೇತ್ರ ಇಂದು ಬೆಳೆದು ಹೆಮ್ಮರವಾಗಿದೆ. ಅವರ ಸೇವೆ ಅವಿಸ್ಮರಣೀಯ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅಭಿಪ್ರಾಯಪಟ್ಟರು.

ಕುಂಜಿಲ ವಿವಿದೋದ್ಧೇಶ ಸಹಕಾರ ದವಸ ಭಂಡಾರ ಮತ್ತು ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಕಕ್ಕಬ್ಬೆ ಮುತ್ತವ್ವ ಹಾಲ್‍ನಲ್ಲಿ ಆಯೋಜಿಸಲಾಗಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ ಹಾಗೂ ಕುಂಜಿಲ ಸಹಕಾರ ಧವಸ ಭಂಡಾರದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿರುವ ದವಸ ಭಂಡಾರದ ಸ್ಥಾಪಕರು ಮತ್ತು ಅದರ ಕಟ್ಟಡಕ್ಕೆ ಸ್ಥಳಾವಕಾಶ ನೀಡಿದವರು ನಮ್ಮ ಹಿರಿಯರೇ ಆಗಿದ್ದಾರೆ. ಅವರ ಕೊಡುಗೆ ಅಪಾರವಾದುದು ಎಂದರು. ಇದರ ಶತಮಾನೋತ್ಸವ ಸಂದರ್ಭದಲ್ಲಿ ಹಿರಿಯ ಜೀವಗಳ ಸ್ಮರಣೆ ಅಗತ್ಯ ಎಂದರು. ಆದರೆ ಇತ್ತೀಚಿನ ವರ್ಷಗಳಲ್ಲಿ ದವಸ ಭಂಡಾರಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಸಹಕಾರ ಸಂಘಗಳು ವಾರ್ಷಿಕ 8 ರಿಂದ 9 ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿವೆ. ಇಂದು ಬ್ಯಾಂಕ್‍ಗಳ ಪೈಪೆÇೀಟಿಯಿಂದ ರೈತರಿಗೆ ಸುಲಭವಾಗಿ ಸಾಲ ದೊರೆಯುತ್ತಿದೆ ಎಂದರು. ರೈತರ ಹಿತದೃಷ್ಟಿಯಿಂದ ಡಿ.ಸಿ.ಸಿ. ಬ್ಯಾಂಕ್‍ನ ಸಾಲದ ಬಡ್ಡಿಯನ್ನು ಶೇ. 13 ರಿಂದ ಶೇ. 10 ಇಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇತ್ತೀಚಿಗೆ ಡಿಸಿಸಿ ಬ್ಯಾಂಕ್‍ನ ನಾಲ್ಕು ಗ್ರಾಹಕರು ನಾಪೆÇೀಕ್ಲುವಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷರ ವಿರುದ್ಧ ಸುಳ್ಳು ಆರೋಪ ಮಾಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಗ್ರಾಹಕರಿಗೆ ಸಾಲ ಮರುಪಾವತಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಮುದ್ರಾ ಯೋಜನೆಯಲ್ಲಿ ಪಡೆದ ಸಾಲದ ಬಡ್ಡಿಯೊಂದಿಗೆ ಶೇ. 20 ಅಸಲು ಪಾವತಿಸಲು ಎಲ್ಲಾ ಶಾಖೆಗಳಿಗೆ ತಿಳಿಸಲಾಗಿತ್ತು. ಆದರೆ ಇದನ್ನು ಕಾರಣವಾಗಿಟ್ಟುಕೊಂಡು ಅಧ್ಯಕ್ಷರ ಸರ್ವಾಧಿಕಾರಿ ಧೋರಣೆ ಎಂದು ಹೇಳಿಕೆ ನೀಡಿದ್ದಾರೆ. ಅವರು ಮೊದಲು ಬ್ಯಾಂಕ್‍ನಲ್ಲಿ ಮರುಪಾವತಿಸಲು ಬಾಕಿಯಿರುವ ಸಾಲವನ್ನು ಮರುಪಾವತಿಸಿ ಸಹಕಾರ ನೀಡಲಿ. ಅದರ ಬದಲು ಮನಸೋ ಇಚ್ಛೆ ಪತ್ರಿಕಾ ಹೇಳಿಕೆ ನೀಡುತ್ತಿರುವದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ ಎಂದು ತಿಳಿಸಿದರು. ನಾವು ಎಂದೂ ರೈತರ, ಬೆಳೆಗಾರರ ವಿರೋಧಿಗಳಲ್ಲ. ಕೊಡಗಿನ ಬೆಳೆಗಾರರ ಹಿತ ಕಾಯುವದು ನಮ್ಮ ಜವಾಬ್ದಾರಿ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಜಿಲ್ಲೆಯಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅನುಸರಿಸಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ನಾವು ವೈಜ್ಞಾನಿಕವಾಗಿ ಬದಲಾಗಬೇಕು. ವಿಶ್ವದಲ್ಲಿ ಉನ್ನತ ಶ್ರೇಣಿಯಲ್ಲಿರುವ ಇಸ್ರೇಲ್‍ನ ಕೃಷಿ ತಂತ್ರಜ್ಞಾನವನ್ನು ಬಳಸಿಕೊಂಡು ನಾವು ವೈಜ್ಞಾನಿಕವಾಗಿ ಬದಲಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂಜಿಲ ವಿವಿದೋದ್ಧೇಶ ಸಹಕಾರ ಧವಸ ಭಂಡಾರದ ಅಧ್ಯಕ್ಷ ಹಾಗೂ ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಲ್ಯಾಟಂಡ ರಘು ತಮ್ಮಯ್ಯ ಮಾತನಾಡಿ, ಯಾವದೇ ಫಲಾಪೇಕ್ಷೆಯ ನಿರೀಕ್ಷೆಯಿಲ್ಲದೆ ಸಹಕಾರ ಸಂಘಗಳಲ್ಲಿ ದುಡಿದರೆ ಮಾತ್ರ ಸಂಘಗಳ ಅಭಿವೃದ್ಧಿ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ದವಸ ಭಂಡಾರದಲ್ಲಿ ಇಲ್ಲಿಯವರೆಗೆ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ನಾಟೋಳಂಡ ಸಿ.ಚರ್ಮಣ್ಣ, ಮೇಚಂಡ ಎಂ. ಅಚ್ಚಯ್ಯ, ಕಲಿಯಂಡ ಡಿ. ಅಪ್ಪಣ್ಣ, ನಂಬಡಮಂಡ ಸೋಮಣ್ಣ, ಕಲ್ಯಾಟಂಡ ಎ. ತಮ್ಮಯ್ಯ ಹಾಗೂ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದ ಕಲಿಯಂಡ ಸಿ. ನಾಣಯ್ಯ, ಕಲ್ಯಾಟಂಡ ಕೆ. ಮುತ್ತಪ್ಪ, ನಾಟೋಳಂಡ ಪೆÇನ್ನಪ್ಪ, ಪಾಂಡಂಡ ಜೆ. ನರೇಶ್, ಬಾಚಮಂಡ ಪಿ. ಚಿಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮಡಿಕೇರಿ ತಾಲೂಕು ಪಂಚಾಯಿತಿ ಅಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರು ಹಾಜರಿದ್ದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.