ಮಡಿಕೇರಿ, ನ. 18: ನಗರದಲ್ಲಿರುವ ಶ್ರೀಶಕ್ತಿ ವೃದ್ಧಾಶ್ರಮದಲ್ಲಿ ದೀಪಾವಳಿಯ ಸಲುವಾಗಿ ಅಲ್ಲಿರುವ ಹಿರಿಯರಿಗೆ ಉಡುಪುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಆಶ್ರಮದ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನ್ಯಾಯಾಧೀಶೆ ನೂರುನ್ನೀಸಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೀಪಾವಳಿ ದೀಪಗಳ ಹಬ್ಬ, ಬೆಳಕಿನ ಹಬ್ಬ, ಬದುಕಿನಲ್ಲಿರುವ ಕತ್ತಲನ್ನು ಹೊಡೆದೋಡಿಸುವ ಮೂಲಕ ನಮ್ಮ ಜೀವನವನ್ನು ಸಂತಸವಾಗಿಟ್ಟು ಕೊಳ್ಳಬೇಕು ಎಂದರು.
ಸಭಾ ಕಾರ್ಯಕ್ರಮದ ನಂತರ ವಿಶೇಷವಾಗಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಮಡಿಕೇರಿಯ ಗಾಯಕ ರಜತ್ ರಾಜ್ ಡಿ.ಹೆಚ್. ಅವರಿಂದ ಸಂಗೀತ ಗಾಯನ ನಡೆಯಿತು. ಕಾರ್ಯಕ್ರಮದಲ್ಲಿ ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷ ವಿನು, ಸಮಾಜ ಸೇವಕ ಪ್ರದೀಪ್ ಕರ್ಕೇರ ಗಣೇಶ್, ಸುಖೇಶ್, ಶಕ್ತಿ ಆಶ್ರಮದ ಮೇಲ್ವಿಚಾರಕ ಸತೀಶ್, ಡಿ.ಎಸ್.ಎಸ್. ತಾಲೂಕು ಸಂಚಾಲಕ ಎ.ಪಿ. ದೀಪಕ್, ಪತ್ರಕರ್ತ ರಂಜಿತ್ ಕವಲಪಾರ, ಮಂಜು ಹಾಗೂ ಮತ್ತಿತರರು ಹಾಜರಿದ್ದರು.