ಚೆಟ್ಟಳ್ಳಿ, ನ. 18: ಚೆಟ್ಟಳ್ಳಿಯಲ್ಲಿ ನೂತನ ಕೊಡವ ಸಮಾಜವನ್ನು ಚೆಟ್ಟಳ್ಳಿ ಜೋಮಾಲೆ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾಚಂಗಪ್ಪ ಅಧ್ಯಕ್ಷತೆಯಲ್ಲಿ ಅನಾವರಣಗೊಳಿಸಲಾಯಿತು.

ಮುಳ್ಳಂಡ ಶೋಭಾಚಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡವರ ಆಚಾರ ವಿಚಾರ ಸಂಪ್ರದಾಯಗಳನ್ನು ಉಳಿಸಿ ಬೆಳೆಸಲು ಚೆಟ್ಟಳ್ಳಿಯಲ್ಲಿ ಕೊಡವ ಸಮಾಜವನ್ನು ಅಸ್ತಿತ್ವಗೊಳಿಸ ಬೇಕೆಂದು ತೀರ್ಮಾನಿಸಿ ಚೆಟ್ಟಳ್ಳಿ ಕೊಡವ ಸಮಾಜವನ್ನು ಕಾನೂನಾತ್ಮಕವಾಗಿ ನೋಂದಾಯಿಸಿ ದ್ದೇವೆ. ಎಲ್ಲರ ಸಹಕಾರದಿಂದ ಸಂಘವನ್ನು ಮುನ್ನಡೆಸೋಣ ಎಂದರು. ಸಂಘದ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.

ಸಂಘದ ಬೈಲಾವನ್ನು ಐಚೆಟ್ಟಿರ ಸುನಿತ ಮಾಚಯ್ಯ ಓದಿ ಸಭೆಯಲ್ಲಿ ಅಂಗೀಕರಿಸಲಾಯಿತು. ಚೆಟ್ಟಳ್ಳಿ ಕೊಡವ ಸಮಾಜಕ್ಕೆ ನೂತನ ಕಮಿಟಿ ಸದಸ್ಯರನ್ನು ಆಯ್ಕೆ ಮಾಡಲಾಗಿ ಸಭೆಯಲ್ಲಿ ಅಂಗೀಕರಿಸಲಾಯಿತು. ಸಂಘದ ಅಬಿವೃದ್ಧಿ ಬಗ್ಗೆ ಹಲವು ಸದಸ್ಯರು ಸಲಹೆ ಸೂಚನೆಯನ್ನು ನೀಡಿದರು. ಅಧ್ಯಕ್ಷೀಯ ಭಾಷಣದಲ್ಲಿ ಶೋಭಾ ಚಂಗಪ್ಪ ಮಾತನಾಡಿ ಸಂಘದ ನಿಯಮ, ಮುಂದಿನ ಯೋಜನೆ ಬಗ್ಗೆ ತಿಳಿಸಿದರು. ನೂತನವಾಗಿ ಆಯ್ಕೆಗೊಂಡ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ ಸಂಘದ ಅಧ್ಯಕ್ಷನಾಗಿ ಆಯ್ಕೆಮಾಡಿದಕ್ಕೆ ಎಲ್ಲರಿಗೂ ವಂದಿಸಿ ನೂತನವಾಗಿ ಆಯ್ಕೆಗೊಂಡ ಆಡಳಿತ ಮಂಡಳಿಯು ಹಲವು ಯೋಜನೆಗಳನ್ನು ಕೈಗೊಳ್ಳುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮ ಪಡುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಸಮಾಜದ ಟ್ರಸ್ಟಿಗಳಾದ ಪುತ್ತರಿರ ಕಾಶಿ ಸುಬ್ಬಯ್ಯ, ಪುತ್ತರಿರ ಗಂಗೆ ಅಚ್ಚಯ್ಯ, ಐಚೆಟ್ಟಿರ ಮಾಚಯ್ಯ, ಕಾಡ್ಯಮಾಡ ವಿಸ್ಸಿ ಅಪ್ಪಯ್ಯ, ಪುತ್ತರಿರ ಕರುಣ್‍ಕಾಳಯ್ಯ, ಪಳಂಗಂಡ ಸುಮಿ ಅಪ್ಪಯ್ಯ, ಮುಳ್ಳಂಡ ಮಾಯಮ್ಮ ತಮ್ಮಯ್ಯ, ಐಚೆಟ್ಟಿರ ಸುನಿತ ಮಾಚಯ್ಯ ಹಾಜರಿದ್ದರು.

ಚೆಟ್ಟಳ್ಳಿ ಕೊಡವ ಸಮಾಜಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಅಧ್ಯಕ್ಷರಾಗಿ ಮುಳ್ಳಂಡ ರತ್ತು ಚಂಗಪ್ಪ, ಉಪಾಧ್ಯಕ್ಷರಾಗಿ ಐಚೆಟ್ಟಿರ ಸುನಿತ ಮಾಚಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್‍ಕಾಳಯ್ಯ, ಜಂಟಿ ಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ, ಖಜಾಂಚಿ ಪುತ್ತರಿರ ಗಂಗೆ ಅಚ್ಚಯ್ಯ, ಜಂಟಿ ಕಾರ್ಯದರ್ಶಿ ಐಚೆಟ್ಟಿರ ಉಮೇಶ್, ಕಾನೂನು ಸಲಹೆಗಾರರಾಗಿ ಕಡೇಮಾಡ ವಿನ್ಸಿ ಅಪ್ಪಯ್ಯ, ನಿರ್ದೇಶಕರಾಗಿ ಪುತ್ತರಿರ ಕಾಶಿ ಸುಬ್ಬಯ್ಯ, ಬಟ್ಟೀರ ನವೀನ್ ನಾಣಯ್ಯ, ಚೋಳಪಂಡ ನಾಣಯ್ಯ, ಕೊಂಗೇಟಿರ ಕುಸುಮ ಪೊನ್ನಪ್ಪ, ಪಳಂಗಂಡ ಶ್ಯಾಮ್ ಕಾಳಪ್ಪ ಆಯ್ಕೆಯಾದರು.