ಹೊದ್ದೂರು, ನ. 18: ಮೂರ್ನಾಡು ಸಮೀಪದ ಹೊದ್ದೂರುವಿನ ಶ್ರೀ ಶಾಸ್ತಾವೇಶ್ವರ ದೇಗುಲದ ಪುನರ್ ಪ್ರತಿಷ್ಠಾಪನಾ ದಿನ ಮತ್ತು ವಾರ್ಷಿಕ ಪೂಜೆ ತಾ. 21 ರಂದು ನಿಗದಿಪಡಿಸಲಾಗುವುದು.

ಈ ಪ್ರಯುಕ್ತ ತಾ. 21 ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ, ನಂತರ ಕಲಶಾಭಿಷೇಕ, ಮಹಾಪೂಜೆ, ಮಹಾ ಮಂಗಳಾರತಿ, ಮಧ್ಯಾಹ್ನ 1 ಗಂಟೆಯ ಬಳಿಕ ಸಾಮೂಹಿಕ ಅನ್ನಸಂತರ್ಪಣೆ ನಡೆಯಲಿದೆ ಅಂದು ನಡೆಯುವ ಕಾರ್ಯಕ್ರಮದಲ್ಲಿ ದೇಗುಲದ ಪುನರ್ ಪ್ರತಿಷ್ಠಾಪನೆ ಬಗ್ಗೆ ಧಾರ್ಮಿಕ ಕೈಂಕರ್ಯಗಳು ನೆರವೇರಲಿವೆ.

ಕಾರ್ಯಕ್ರಮದಲ್ಲಿ ಕೇರಳದ ತಳಿಪರಂಬಿನ ಪುದ್‍ಸೇರಿಲಾ ಶಂಕರನ್ ನಂಬೂದರಿಪಾಡ್, ಜೋತಿಷ್ಯರಾದ ಮಾಧವನ್ ಪೊದುವಾಳ್, ಶಿಲ್ಪಶಾಸ್ತ್ರಜ್ಞ ಮಹೇಶ್ ಸೇರಿದಂತೆ ಇನ್ನಿತರ ಪ್ರಮುಖರು ಭಾಗವಹಿಸುವರು ಎಂದು ದೇವಳದ ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.