ಕೂಡಿಗೆ, ನ. 18: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ತೊರೆನೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಉದ್ಘಾಟನೆಯನ್ನು ಕುಶಾಲನಗರ ಕಂದಾಯ ಪರಿವೀಕ್ಷಕ ಸಂತೋಷ ನೆರವೇರಿಸಿದರು. ರೈತರು ನಮೂನೆ- 1 ರಲ್ಲಿ ಪೌತಿ ಖಾತೆ ಕುರಿತು ಅರ್ಜಿ, ಖಾತೆದಾರರು ಮೃತರಾಗಿರುವ ಸರ್ವೆ ನಂಬರ್ ಪಹಣೆ, ಮೃತರ ಸಮರ್ಥನೆ ಪತ್ರ, ವಂಶವೃಕ್ಷ, ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ ಎಂದು ತಿಳಿಸಿದರು. ತೊರೆನೂರು ಗ್ರಾಮ ಲೆಕ್ಕಾಧಿಕಾರಿ ಪೀರಾ ಮಹಮ್ಮದ್ ಮತ್ತು ಹೆಬ್ಬಾಲೆ ಗ್ರಾಮ ಲೆಕ್ಕಾಧಿಕಾರಿ ಸಚಿನ್ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.