ವೀರಾಜಪೇಟೆ, ನ. 18: ಇಲ್ಲಿನ ನಿಸರ್ಗ ಬಡಾವಣೆ ಬಳಿ ಸ್ಕೂಟರ್ಗೆ ಡಿಕ್ಕಿ ಹೊಡೆದು ಸವಾರನ ಸಾವಿಗೆ ಕಾರಣನಾಗಿ ತಲೆಮರೆಸಿಕೊಂಡಿದ್ದ ವಾಹನದ ಚಾಲಕ ಮರಿಸ್ವಾಮಿ ಎಂಬಾತನನ್ನು ಇಲ್ಲಿನ ನಗರ ಪೊಲೀಸರು ಬಂಧಿಸಿದ್ದಾರೆ.
ತಾ. 15 ರಂದು ಸಂಜೆ 6.30ರ ಸಮಯದಲ್ಲಿ ಮೂರ್ನಾಡು ಬಳಿಯ ಹೊದ್ದೂರು ಗ್ರಾಮದ ಎ.ಎಸ್. ತಿಮ್ಮಯ್ಯ ಎಂಬವರು ಡಿಯೋ ಸ್ಕೂಟರ್ (ಕೆಎ 51 ಎಚ್.ಇ 0152)ನಲ್ಲಿ ಬಿಟ್ಟಂಗಾಲದ ಕಡೆಗೆ ತೆರಳುತ್ತಿದ್ದಾಗ ಎದುರು ಬದಿಯಿಂದ ಬಂದ ಸ್ವರಾಜ್ ಮಜ್ದಾ (ಕೆಎ 12 ಬಿ 1374) ಮಿನಿ ಲಾರಿ ಡಿಕ್ಕಿಯಾಗಿ ತಿಮ್ಮಯ್ಯ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಸ್ಕೂಟರ್ಗೆ ಡಿಕ್ಕಿಯಾದ ವಾಹನ ಸಹಿತ ಚಾಲಕ ನಾಪತ್ತೆಯಾಗಿದ್ದ. ಪೊಲೀಸರು 304 ಎ ಪ್ರಕಾರ ಪ್ರಕರಣ ದಾಖಲಿಸಿ ಚಾಲಕನ ಶೋಧನೆಯಲ್ಲಿ ತೊಡಗಿದ್ದು, ಚಾಲಕನನ್ನು ಬಂಧಿಸಿ ವಾಹನ ವಶಪಡಿಸಿಕೊಂಡಿದ್ದಾರೆ.