ಮಡಿಕೇರಿ, ನ. 11: ದಶಕಗಳಿಂದ ರಸ್ತೆ ಇಲ್ಲದೆ, ಮಳೆಗಾಲದಲ್ಲಿ ಕೆಸರಿನಿಂದ ಹೊಂಡಾಗುಂಡಿಯಾದ, ಬೇಸಿಗೆಯಲ್ಲಿ ಧೂಳು ತುಂಬಿಕೊಂಡ ರಸ್ತೆಯಲ್ಲೇ ಸಂಚರಿಸುತ್ತಿದ್ದ ಸಂಕಷ್ಟದಲ್ಲಿದ್ದ ಮಡಿಕೇರಿ ನಗರಸಭಾ ವ್ಯಾಪ್ತಿಯ ಟಿ.ಜಾನ್ ಬಡಾವಣೆಗೆ ಕೊನೆಗೂ ರಸ್ತೆ ಭಾಗ್ಯ ಸಿಕ್ಕಂತಾಗಿದೆ.
ಬಡಾವಣೆ ನಿವಾಸಿಗಳ ಸತತ ಕೋರಿಕೆ, ಮನವಿಗೆ ಕೊನೆಗೂ ಮುಕ್ತಿ ಸಿಕ್ಕಿದ್ದು, ಶಾಸಕರ ಅನುದಾನದಲ್ಲಿ ಡಾಮರು ರಸ್ತೆ ನಿರ್ಮಾಣವಾಗಿದೆ. ಇಂದು ರಸ್ತೆಗೆ ಡಾಮರೀಕರಣ ಆಗಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಡಾಮರೀಕರಣ ಸಂದರ್ಭ ನಗರಸಭಾ ಅಭಿಯಂತರೆ ವನಿತಾ, ಗುತ್ತಿಗೆದಾರರಾದ ರಾಜೇಶ್ ಯಲ್ಲಪ್ಪ, ಧನಂಜಯ ಶೆಟ್ಟಿ ಇದ್ದರು.