ಗೋಣಿಕೊಪ್ಪ ವರದಿ, ನ. 17: ಪಹಣಿಯಲ್ಲಿ ಪೌತಿಖಾತೆಯಿಂದ ತೆರವು ಆದ ಪಟ್ಟೆದಾರರ ಸ್ಥಾನಕ್ಕೆ ಪಟ್ಟೆದಾರನ ಮಕ್ಕಳ ಹೆಸರು ದಾಖಲಾಗಬೇಕು ಎಂಬ ನಿಯಮವಿಲ್ಲ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಶ್ರೀಮಂಗಲ ಫ್ಯಾಕ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನಿಧನರಾದ ಪಟ್ಟೆದಾರನ ಹೆಸರನ್ನು ತೆಗೆಯಲು ಮರಣ ಪ್ರಮಾಣ ಪತ್ರ ನೀಡಿ ವರ್ಗಾವಣೆ ಮಾಡಬಹುದಾಗಿದೆ. ಪಟ್ಟೆದಾರನ ಮಕ್ಕಳ ಹೆಸರಿಗೆ ಜಾಗವನ್ನು ವರ್ಗಾಯಿಸಿ ನಂತರ, ವಾರಸುದಾರನಿಗೆ ದಾಖಲಿಸಬೇಕು ಎಂಬ ನಿಯಮವಿಲ್ಲ. ಇಂತಹ ದೂರುಗಳು ಹೆಚ್ಚಾಗುತ್ತಿದ್ದು, ಮಕ್ಕಳಿಲ್ಲದ ಪಟ್ಟೆದಾರನ ಹೆಸರಿರುವ ಜಾಗಕ್ಕೆ ಸರ್ಕಾರದ ಹೆಸರಿಗೆ ದಾಖಲು ಮಾಡಬೇಕೇ. ಈ ಬಗ್ಗೆ ಗೊಂದಲ ಬೇಡ.

ಕುಟುಂಬಸ್ಥರು ನಿಧನರಾದ ಪ್ರಮಾಣ ಪತ್ರ ನೀಡಿ, ಖಾತೆಯಿಂದ ಪೌತಿ ಹೆಸರನ್ನು ಹೊರತೆಗೆಯ ಬಹುದಾಗಿದೆ ಎಂದರು. ಪಕ್ಷ ಬೆಳೆದಿದೆ. ಅದನ್ನು ಪೋಷಿಸುವ ಜವಾಬ್ದಾರಿ ಎಲ್ಲರಲ್ಲೂ ಇದೆ. ಪಕ್ಷದ ಜವಾಬ್ದಾರಿಯನ್ನು ಬೇರೆ, ಬೇರೆ ವರ್ಗಕ್ಕೆ ನೀಡಲಾಗಿದೆ. ಹಿಂದುಳಿದವರಿಗೆ, ರೈತರಿಗೆ ಹೀಗೆ ಸಾಕಷ್ಟು ವಿಭಾಗಗಳಲ್ಲಿ ಪಕ್ಷ ಕಟ್ಟಲು ಮುಂದಾಗಬೇಕಿದೆ ಎಂದು ಅವರು ಹೇಳಿದರು.

ವೀರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ಮಾತನಾಡಿ, ಪಕ್ಷ ಬಲವರ್ಧನೆಗೆ ಕಾರ್ಯಕರ್ತರು ಮತ್ತಷ್ಟು ಶ್ರಮಿಸಬೇಕಿದೆ. ಚುನಾವಣೆಯಲ್ಲಿ ಪಕ್ಷ ಗುರುತಿಸುವ ಅಭ್ಯರ್ಥಿ ಗೆಲುವಿಗೆ ಮುಂದಾಗಬೇಕು ಎಂದರು. ಒಬಿ.ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜೇಶ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಬಿರುನಾಣಿ, ಟಿ.ಶೆಟ್ಟಿಗೇರಿ, ಶ್ರೀಮಂಗಲ, ಕುಟ್ಟ, ಕೆ. ಬಾಡಗ, ನಾಲ್ಕೇರಿ ಈ ಭಾಗಗಳ 6 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಸಂದರ್ಭ ಜಿಲ್ಲಾ ಒಬಿಸಿ ಘಟಕ ಅಧ್ಯಕ್ಷ ಆನಂದ್ ರಘು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಞಂಗಡ ಅರುಣ್ ಭೀಮಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶರೀನ್ ಸುಬ್ಬಯ್ಯ ಚೋಡುಮಾಡ, ಕೃಷಿ ಮೋರ್ಚಾ ತಾಲೂಕು ಅಧ್ಯಕ್ಷ ಕಟ್ಟೇರ ಈಶ್ವರ, ತಾಲೂಕು ಒಬಿಸಿ ಪ್ರಧಾನ ಕಾರ್ಯದರ್ಶಿ ಸುಬ್ರಮಣಿ, ಮಹಾಶಕ್ತಿಕೇಂದ್ರ ಸಂಚಾಲಕ್ ಮುರುಳಿ ಮುತ್ತಪ್ಪ, ಚೋಕಿರ ಕಲ್ಪನಾ, ಬೊಟ್ಟಂಗಡ ರಾಜು ಹಾಗೂ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳು ಹಾಗೂ ಒ.ಬಿ.ಸಿ ಘಟಕದ ಜಿಲ್ಲಾ, ತಾಲೂಕು ಹಾಗೂ ಪಂಚಾಯಿತಿ ಮಟ್ಟದ ಪದಾಧಿಕಾರಿಗಳು, ಮಹಾ ಶಕ್ತಿ ಕೇಂದ್ರ ಸಂಚಾಲಕರು, 6 ಪಂಚಾಯಿತಿಯ ಶಕ್ತಿ ಕೇಂದ್ರ ಪ್ರಮುಖರು, ಸಹ ಪ್ರಮುಖರು ಹಾಗೂ ಪಕ್ಷದ ಎಲ್ಲಾ ಕಾರ್ಯಕರ್ತರು