ಮಡಿಕೇರಿ, ನ. 17: ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವದ ಬಳಿಕ ಒಂದು ತಿಂಗಳ ಕಾಲ ನಡೆಯುವ ಜಾತ್ರೆಯ ಅಂತಿಮ ದಿನವಾದ ಕಿರು ಸಂಕ್ರಮಣದ ಅಂಗವಾಗಿ ತಾ. 16ರಂದು ವಿಶೇಷ ಪೂಜೆ ನಡೆಯಿತು. ಕಿರು ಸಂಕ್ರಮಣದ ದಿನವಾಗಿದ್ದ ನಿನ್ನೆ ಕ್ಷೇತ್ರದಲ್ಲಿ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿದ್ದಾಟಂಡ ಎಸ್. ತಮ್ಮಯ್ಯ, ಮಣವಟ್ಟಿರ ದೊರೆ, ಹರ್ಷಿತ್ ಬಿದ್ದಾಟಂಡ, ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ತಕ್ಕರಾದ ಕೋಡಿ ಮೋಟಯ್ಯ, ಪಾರುಪತ್ಯೆಗಾರ ಕೊಂಡೀರ ಪೊನ್ನಣ್ಣ ಮತ್ತಿತರರು ಪಾಲ್ಗೊಂಡಿದ್ದರು.