ಶನಿವಾರಸಂತೆ, ನ. 17: ಶನಿವಾರಸಂತೆ ಸಮೀಪದ ನಂದಿಗುಂದ ಗ್ರಾಮದ ಸುಧಾಕರ್ ಎಂಬಾತ ಬಸ್ ನಿಲ್ದಾಣದಲ್ಲಿ ತಾ. 16ರಂದು ಸಾರ್ವಜನಿಕರಿಗೆ ಅನಧಿಕೃತವಾಗಿ ಮದ್ಯ ಕುಡಿಯಲು ಅನುವು ಮಾಡುತ್ತಿರುವುದಾಗಿ ಶನಿವಾರಸಂತೆ ಠಾಣಾಧಿಕಾರಿ ಹೆಚ್.ಇ. ದೇವರಾಜ್ ಅವರಿಗೆ ದೊರೆತ ಮಾಹಿತಿಯ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ಲಾಸ್ಟಿಕ್ ಲೋಟಗಳನ್ನು ವಶಪಡಿಸಿಕೊಂಡಿದ್ದು, ಠಾಣಾ ಹೆಡ್‍ಕಾನ್ಸ್‍ಟೇಬಲ್ ಎ.ಸಿ. ಸಿದ್ದಯ್ಯ 15(ಎ)ಕೆ.ಇ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.