ಸುಂಟಿಕೊಪ್ಪ,ನ.15: ಹೊರಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ವಾಹನಗಳು ಅಪಘಾತ ಹಾಗೂ ದುರಸ್ತಿಗೊಳಗಾದಾಗ ವರ್ಕ್‍ಶಾಪ್ ವೃತ್ತಿ ನಿರ್ವಹಿಸುವ ನಾವುಗಳು ತುರ್ತಾಗಿ ಆಗಿ ಸ್ಪಂದಿಸುವ ಕೆಲಸವನ್ನು ಮಾಡಬೇಕೆಂದು ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಆರ್. ಸುನಿಲ್‍ಕುಮಾರ್ ಹೇಳಿದರು.

ಕೊಡವ ಸಮಾಜದಲ್ಲಿ ಆಯೋಜಿಸಲಾದ ವರ್ಕ್‍ಶಾಪ್ ಮಾಲೀಕರ ಸಂಘದ ವತಿಯಿಂದ ನೂತನವಾಗಿ ಸದಸ್ಯತ್ವ ಪಡೆದ ಸದಸ್ಯರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ವೃತ್ತಿಯಲ್ಲಿ ನಾವುಗಳು ವಾಹನಗಳ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಕೊಡಗುಜಿಲ್ಲೆ ಪ್ರವಾಸಿ ತಾಣವಾಗಿದ್ದು, ಹೊರಜಿಲ್ಲೆ ಹಾಗೂ ಹೊರರಾಜ್ಯ ಗಳಿಂದ ಆಗಮಿಸುವ ವಾಹನಗಳು ಅಪಘಾತ ಹಾಗೂ ದುರಸ್ತಿಗೀಡಾದಾಗ ಕೂಡಲೆ ಸ್ಪಂದಿಸುವ ಮಾನವೀಯ ಮೌಲ್ಯವನ್ನು ರೂಡಿಸಿಕೊಳ್ಳ ಬೇಕೆಂದರು. ವರ್ಕ್‍ಶಾಪ್ ಮಾಲೀಕರು ಕಡ್ಡಾಯವಾಗಿ ಗ್ರಾಮ ಪಂಚಾಯಿತಿಯಿಂದ ತಮ್ಮ ಮಳಿಗೆಯ ಪರವಾನಾಗಿಯನ್ನು ಹೊಂದಿಕೊಳ್ಳ ಬೇಕು ಸರಕಾರದ ಯೋಜನೆಯನ್ನು ಪಡೆಯಬೇಕಾದರೆ ಇವುಗಳು ಅತ್ಯಗತ್ಯ ಎಂದರು.

ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಇತರೆ ವೃತ್ತಿ ಭಾಂದವರಿಗೆ ರಾಜ್ಯ ಸರಕಾರದಿಂದ ಧನ ಸಹಾಯವನ್ನು ನೀಡಲಾಗಿದೆ. ವರ್ಕ್‍ಶಾಪ್ ವೃತ್ತಿಯಲ್ಲಿ ತೊಡಗಿಸಿ ಕೊಂಡಿರುವವರಿಗೆ ಯಾವುದೇ ಸಹಾಯಧನ ದೊರೆಯದಿರುವುದು ವಿಷಾದನೀಯ. ಜಿಲ್ಲೆಯ ಶಾಸಕರು ಗಳನ್ನು ಭೇಟಿ ಮಾಡಿ ಸಹಾಯ ಧನಕ್ಕಾಗಿ ಬೇಡಿಕೆ ಸಲ್ಲಿಸಲಾಗುವುದು ಎಂದು ಸುನಿಲ್ ಕುಮಾರ್ ಹೇಳಿದರು.

ಸಭೆಯನ್ನು ಉದ್ದೇಶಿಸಿ ನಿಕಟಪೂರ್ವ ಅಧ್ಯಕ್ಷರುಗಳಾದ ಪಿ.ಆರ್. ಸುಕುಮಾರ್, ವಿ.ಎ. ಸಂತೋಷ್, ವಿನೋದ್ ಮಾತನಾಡಿ ದರು. ಸಮಾರಂಭದ ವೇದಿಕೆಯಲ್ಲಿ ಉಪಾಧ್ಯಕ್ಷರಾದ ಅನೀಶ್, ಸಹ ಕಾರ್ಯದರ್ಶಿ ಉದಯ, ಖಜಾಂಜಿ ಸತೀಶ್, ಮತ್ತಿತರರು ಇದ್ದರು.