ನಾಪೋಕ್ಲು, ನ. 15: ಇಲ್ಲಿಗೆ ಸಮೀಪದ ನೆಲಜಿ ಅಂಬಲ ಮಹಿಳಾ ಸಮಾಜದ ವತಿಯಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸ ಲಾಗಿದ್ದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕೇಚಿರ ಸಮನ್ ಪ್ರಥಮ ಸ್ಥಾನ ಗಳಿಸಿದರು. ದ್ವಿತೀಯ ಸ್ಥಾನ ಬಡುವಂಡ ಮುತ್ತಪ್ಪ ಅವರ ಪಾಲಾದರೆ ತೃತೀಯ ಸ್ಥಾನವನ್ನು ಕಲಿಯಂಡ ಕೌಶಿಕ್ ಪಡೆದರು.

ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮಾಳೆಯಂಡ ಅಪ್ಪಣ್ಣ ಮತ್ತು ತಂಡ ಜಯಗಳಿಸಿತು. ಮಾಳೆಯಂಡ ಸುಬ್ಬಯ್ಯ ಮತ್ತು ತಂಡ ದ್ವಿತೀಯ ಸ್ಥಾನ ಗಳಿಸಿತು. ಮಹಿಳಾ ವಿಭಾಗದಲ್ಲಿ ಅಪ್ಪುಮಣಿಯಂಡ ಡೀನಾ ಮತ್ತು ತಂಡ ಪ್ರಥಮ ಸ್ಥಾನ ಗಳಿಸಿದರೆ ದ್ವಿತೀಯ ಸ್ಥಾನವನ್ನು ಹನಿ ಮತ್ತು ತಂಡದವರು ಗಳಿಸಿದರು.

ಸಮಾರೋಪ ಸಮಾರಂಭ: ಉತ್ತಮ ಸಮಾಜ ನಿರ್ಮಾಣವಾಗಲು ತಾಯಂದಿರ ಪಾತ್ರ ಅಪಾರ.ಈ ನಿಟ್ಟಿನಲ್ಲಿ ಮಾತೆಯರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವುದ ರಿಂದ ಉತ್ತಮ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಮುಖ್ಯ ಆಡಳಿತಾಧಿಕಾರಿ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಅನಿಸಿಕೆ ವ್ಯಕ್ತಪಡಿಸಿದರು ಅಂಬಲ ಮಹಿಳಾ ಸಮಾಜದ ವತಿಯಿಂದ ಏರ್ಪಡಿಸಲಾಗಿದ್ದ ಆಟೋಟ ಸ್ಪರ್ಧೆ ಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮೂರ್ನಾಡು ಸರಕಾರಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕಿ ಮುಕ್ಕಾಟಿರ ದೇಚಮ್ಮ ವಿನಯ್, ಕಾಫಿ ಬೆಳೆಗಾರರಾದ ಬದಂಚೆಟ್ಟೀರ ರಾಣಿ ಅಯ್ಯಪ್ಪ, ವೃತ್ತ ನಿರೀಕ್ಷಕ ದಿವಾಕರ್ ಮಾತನಾಡಿದರು. ಈ ಸಂದರ್ಭ ಮುಕ್ಕಾಟಿರ ದೇಚಮ್ಮ ವಿನಯ್ ರೂ. 10,000 ದೇಣಿಗೆಯನ್ನು ಮಹಿಳಾ ಸಮಾಜದ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ವೇದಿಕೆಯಲ್ಲಿದ್ದ ಗಣ್ಯರು ವಿಜೇತರಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಮಾಜದ ಅಧ್ಯಕ್ಷೆ ಮಣವಟ್ಟೀರ ಕಮಲ ಬೆಳ್ಳಿಯಪ್ಪ ವಹಿಸಿದ್ದರು. ವೇದಿಕೆಯಲ್ಲಿ ಕಾಫಿ ಬೆಳೆಗಾರರಾದ ಮಂಡೀರ ಸರೋಜ ದೇವಯ್ಯ, ಕಾಫಿ ಬೆಳೆಗಾರರಾದ ಅಪ್ಪುಮಣಿಯಂಡ ಸರೋಜ ನಾಣಯ್ಯ, ಟ್ರೋಫಿ ದಾನಿಗಳಾದ ಅಲ್ಲಾರಂಡ ಸದಾ ಮಾಚಯ್ಯ, ಚೀಯಕಪೂವಂಡ ಉಮೇಶ್, ಮಹಿಳಾ ಸಮಾಜದ ನಿರ್ದೇಶಕರು, ವಿವಿಧ ಸಂಘಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು. ಅಲ್ಲಾರಂಡ ಪ್ರೀತು ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಕಾರ್ಯದರ್ಶಿ ಅಪ್ಪುಮಣಿಯಂಡ ಡೇಸಿ ಸೋಮಣ್ಣ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.