ಕುಶಾಲನಗರ, ನ. 15: ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಆಶ್ರಯದಲ್ಲಿ ದೀಪಾವಳಿಯನ್ನು ಮಣ್ಣಿನ ಹಣತೆಯ ಸಾಲು ದೀಪಗಳನ್ನು ಬೆಳಗಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.

ಸಂಸ್ಥೆಯ ಉಪ ಪ್ರಾಂಶುಪಾಲ ಬಿ.ಬಿ. ಸಾವಿತ್ರಿ ಹಣತೆ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಸಾಂಪ್ರದಾಯಿಕ ಉಡುಪು ಧರಿಸಿದ್ದ ಎಲ್ಲಾ ಶಿಕ್ಷಕರು ಜತೆಗೂಡಿ ಸಾಲಂಕೃತ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಣೆಯ ಮಹತ್ವವನ್ನು ಸಾರಿದರು. ದೀಪಾವಳಿ ಅಂಗವಾಗಿ ಶಾಲಾ ಆವರಣದಲ್ಲಿ ಶಿಕ್ಷಕಿಯರು ಹಾಕಿದ್ದ ರಂಗೋಲಿ ಗಮನ ಸೆಳೆಯಿತು.