ಕುಶಾಲನಗರ, ನ. 15: ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಮತ್ತು ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಸೂಚನೆ ಹಿನ್ನಲೆಯಲ್ಲಿ ಈ ಬಾರಿಯ ತುಲಾ ಸಂಕ್ರಮಣಕ್ಕೆ ಭಾಗಮಂಡಲ ತಲಕಾವೇರಿಗೆ ಆಗಮಿಸುತ್ತಿರುವ ಭಕ್ತಾದಿಗಳ ಸಂಖ್ಯೆ ಬಹುತೇಕ ಕ್ಷೀಣಗೊಂಡಿದೆ. ಪವಿತ್ರ ಕಾವೇರಿ ತೀರ್ಥೋದ್ಭವ ದಿನದಂದು ಈ ಹಿಂದಿಗಿಂತ ಶೇ. 20 ರಷ್ಟು ಮಾತ್ರ ಭಕ್ತಾದಿಗಳು ಕಂಡುಬಂದಿದ್ದು ಇದೀಗ ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿದೆ. ದಿನನಿತ್ಯ ಕೇವಲ 150 ರಿಂದ 300 ಭಕ್ತಾದಿಗಳು ಮಾತ್ರ ಕ್ಷೇತ್ರಕ್ಕೆ ಭೇಟಿ ನೀಡಿ ಸಾಂಕೇತಿಕ ಪೂಜೆ ಮಾಡಿ ತೆರಳುತ್ತಿರುವುದು ವಾಡಿಕೆಯಾಗಿದೆ. ಈ ಹಿಂದಿನ ತಲಕಾವೇರಿ ಜಾತ್ರೆ ಸಂದರ್ಭ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ಕಂಡುಬರುತ್ತಿದ್ದರು. ಸಂಪ್ರದಾಯದಂತೆ ಸಂಗಮದಲ್ಲಿ ಕುಟುಂಬ ಸದಸ್ಯರು ಹಿರಿಯರಿಗೆ ಕಾರ್ಯ ನೆರವೇರಿಸುವುದ ರೊಂದಿಗೆ ಸ್ನಾನ ಮಾಡಿ ಭಗಂಡೇಶ್ವರನಿಗೆ ಪೂಜೆ ಸಲ್ಲಿಸುವುದು ನಂತರ ತಲಕಾವೇರಿ ಕ್ಷೇತ್ರದಲ್ಲಿ ಕೊಳದಲ್ಲಿ ಮಿಂದು ತೀರ್ಥ ಪಡೆಯುವುದು ವಾಡಿಕೆಯಾಗಿತ್ತು. ಈ ಬಾರಿ ಸರಕಾರದ ಕಟ್ಟುನಿಟ್ಟಿನ ಸೂಚನೆ ಹಿನ್ನಲೆಯಲ್ಲಿ ಸಂಗಮದಲ್ಲಿ ಪಿಂಡ ಕ್ಷೇತ್ರಕ್ಕೆ ಭೇಟಿ ನೀಡಿ ಸಾಂಕೇತಿಕ ಪೂಜೆ ಮಾಡಿ ತೆರಳುತ್ತಿರುವುದು ವಾಡಿಕೆಯಾಗಿದೆ. ಈ ಹಿಂದಿನ ತಲಕಾವೇರಿ ಜಾತ್ರೆ ಸಂದರ್ಭ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ಕಂಡುಬರುತ್ತಿದ್ದರು. ಸಂಪ್ರದಾಯದಂತೆ ಸಂಗಮದಲ್ಲಿ ಕುಟುಂಬ ಸದಸ್ಯರು ಹಿರಿಯರಿಗೆ ಕಾರ್ಯ ನೆರವೇರಿಸುವುದ ರೊಂದಿಗೆ ಸ್ನಾನ ಮಾಡಿ ಭಗಂಡೇಶ್ವರನಿಗೆ ಪೂಜೆ ಸಲ್ಲಿಸುವುದು ನಂತರ ತಲಕಾವೇರಿ ಕ್ಷೇತ್ರದಲ್ಲಿ ಕೊಳದಲ್ಲಿ ಮಿಂದು ತೀರ್ಥ ಪಡೆಯುವುದು ವಾಡಿಕೆಯಾಗಿತ್ತು. ಈ ಬಾರಿ ಸರಕಾರದ ಕಟ್ಟುನಿಟ್ಟಿನ ಸೂಚನೆ ಹಿನ್ನಲೆಯಲ್ಲಿ ಸಂಗಮದಲ್ಲಿ ಪಿಂಡ ಕ್ಷೇತ್ರಕ್ಕೆ ಭೇಟಿ ನೀಡಿ ಸಾಂಕೇತಿಕ ಪೂಜೆ ಮಾಡಿ ತೆರಳುತ್ತಿರುವುದು ವಾಡಿಕೆಯಾಗಿದೆ. ಈ ಹಿಂದಿನ ತಲಕಾವೇರಿ ಜಾತ್ರೆ ಸಂದರ್ಭ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ಕಂಡುಬರುತ್ತಿದ್ದರು. ಸಂಪ್ರದಾಯದಂತೆ ಸಂಗಮದಲ್ಲಿ ಕುಟುಂಬ ಸದಸ್ಯರು ಹಿರಿಯರಿಗೆ ಕಾರ್ಯ ನೆರವೇರಿಸುವುದ ರೊಂದಿಗೆ ಸ್ನಾನ ಮಾಡಿ ಭಗಂಡೇಶ್ವರನಿಗೆ ಪೂಜೆ ಸಲ್ಲಿಸುವುದು ನಂತರ ತಲಕಾವೇರಿ ಕ್ಷೇತ್ರದಲ್ಲಿ ಕೊಳದಲ್ಲಿ ಮಿಂದು ತೀರ್ಥ ಪಡೆಯುವುದು ವಾಡಿಕೆಯಾಗಿತ್ತು. ಈ ಬಾರಿ ಸರಕಾರದ ಕಟ್ಟುನಿಟ್ಟಿನ ಸೂಚನೆ ಹಿನ್ನಲೆಯಲ್ಲಿ ಸಂಗಮದಲ್ಲಿ ಪಿಂಡ ಮಳಿಗೆಗಳು, ಹೋಂಸ್ಟೇಗಳು ಗ್ರಾಹಕರು, ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವುದು ಕಂಡುಬರುತ್ತಿದೆ. ವರ್ಷಂಪ್ರತಿ ಸಾವಿರಾರು ರೂಗಳ ವ್ಯಾಪಾರ ಆಗುತ್ತಿತ್ತು. ಈ ಬಾರಿ ಕಳೆದ 9 ತಿಂಗಳಿನಿಂದ ಯಾವುದೇ ರೀತಿಯ ವ್ಯಾಪಾರ ಕಂಡುಬರುತ್ತಿಲ್ಲ ಎನ್ನುತ್ತಾರೆ ಸ್ಥಳೀಯರಾದ ರಾಘವೇಂದ್ರ ಅವರು. ಮಳಿಗೆಯಲ್ಲಿ ಇರುವ ಸಾಮಗ್ರಿಗಳು ಕೆಲವೊಂದು ಗುಣಮಟ್ಟ ಕೂಡ ಕಳೆದುಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಈ ಮೂಲಕ ಭಾರೀ ನಷ್ಟಕ್ಕೆ ಒಳಗಾಗುತ್ತಿದ್ದೇವೆ ಎನ್ನುವುದು ಅವರ ಪ್ರತಿಕ್ರಿಯೆ. ಕ್ಷೇತ್ರಕ್ಕೆ ತೆರಳುವ ಮಾರ್ಗದಲ್ಲಿ ಸುಮಾರು 200 ಮೀಗಳಷ್ಟು ದೂರದಲ್ಲಿ ವಾಹನ ನಿಲುಗಡೆ ಮಾಡಿ ನಡಿಗೆಯಲ್ಲೇ ತೆರಳಬೇಕಾದ ಹಿನೆÀ್ನಲೆಯಲ್ಲಿ ತಮ್ಮ ವಾಹನವನ್ನು ಬಿಟ್ಟು ಆಟೋ ರಿಕ್ಷಾದಲ್ಲಿ ತಲಾ 10 ರೂ ಪಾವತಿಸಿ ಕ್ಷೇತ್ರಕ್ಕೆ ತೆರಳುವ ವ್ಯವಸ್ಥೆ ಇದ್ದರೂ ಇದು ಭಕ್ತಾದಿಗಳಿಗೆ ಒಂದು ರೀತಿ ಅನಾನುಕೂಲ ಉಂಟಾಗುತ್ತಿರುವುದು ಮಾತ್ರ ಸತ್ಯ. ಆದರೆ ರಿಕ್ಷಾ ಚಾಲಕರ ಪ್ರಕಾರ ತಮಗೆ ಕಳೆದ ಕೆಲವು ತಿಂಗಳಿನಿಂದ ಭಕ್ತಾದಿಗಳ ಕೊರತೆ ಎದುರಾಗಿದ್ದು ಇದರಿಂದ ಜೀವನ ಸಾಗಿಸುವುದು ಕೂಡ ಕಷ್ಟಕರವಾಗಿದೆ ಎಂದು ‘ಶಕ್ತಿ’ಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನು ಕೇವಲ ಬೆರಳೆಣಿಕೆಯ ದಿನಗಳಷ್ಟು ಕಾಲ ತುಲಾ ಸಂಕ್ರಮಣ ಜಾತ್ರೆ ಹಿನ್ನಲೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಲಿದ್ದು ಬರುವ ಜನರ ಸಂಖ್ಯೆ ಅಲ್ಪ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಂದ ಭಕ್ತಾದಿಗಳಂತೂ ಕಾವೇರಮ್ಮನ ಕ್ಷೇತ್ರ ತಲುಪುವ ಮುನ್ನವೇ ಹಿರಿಯ ಅರ್ಚಕರ ದುರಂತ ಉಂಟಾದ ಪ್ರದೇಶವನ್ನು ವೀಕ್ಷಿಸಿ ತಮ್ಮದೇ ಆದ ಧಾಟಿಯಲ್ಲಿ ದುರಂತದಲ್ಲಿ ಮಡಿದ ಅರ್ಚಕರ ಬಗ್ಗೆ ವಿಶ್ಲೇಷಣೆ ಮಾಡಿಕೊಂಡು ಹೋಗುತ್ತಿರುವುದು ಈ ಬಾರಿಯ ಒಂದು ಅನಿರೀಕ್ಷಿತ ಬೆಳವಣಿಗೆ ಯಾಗಿದೆ. ಇಷ್ಟೆಲ್ಲದರ ನಡುವೆ ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವ ರಸ್ತೆ ಅಲ್ಲಲ್ಲಿ ಭಾರೀ ಗಾತ್ರದ ಗುಂಡಿ ಬಿದ್ದಿದ್ದು ವಾಹನ ಸವಾರರು ಮಾತ್ರ ಸಂಬಂಧಿಸಿದ ಇಲಾಖೆಗೆ ಹಿಡಿಶಾಪ ಹಾಕುತ್ತಿರುವುದು ಅಲ್ಲಲ್ಲಿ ಕಾಣಬಹುದು.

- ಚಂದ್ರಮೋಹನ್