ಗೋಣಿಕೊಪ್ಪ ವರದಿ, ನ. 15: ಕರ್ನಾಟಕ ರಾಜ್ಯದ ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಮುಖ್ಯ ವಿದ್ಯುತ್ ಪರಿವೀಕ್ಷಕರಾಗಿ ನೇಮಕಗೊಂಡಿರುವ ಹುದಿಕೇರಿ ಗ್ರಾಮದ ತೀತಿರ ರೋಶನ್ ಅಪ್ಪಚ್ಚು ಅವರನ್ನು ಹುದಿಕೇರಿ ಅಂಜಿಕೇರಿನಾಡ್ ಮಕ್ಕಡ ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಪ್ರಮುಖರಾದ ಚೆಕ್ಕೇರ ರಮೇಶ್ ಚಿಟ್ಯಪ್ಪ, ಚೆಕ್ಕೇರ ಚಂದ್ರಪ್ರಕಾಶ್, ಆದರ್ಶ್, ಚಂಗುಲಂಡ ಅಯ್ಯಪ್ಪ ಇತರರಿದ್ದರು.