ಶನಿವಾರಸಂತೆ, ನ. 15: ಆಲೂರು ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಗಾರೆಕಟ್ಟೆ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಅಂಕನಹಳ್ಳಿ ಗ್ರಾಮದ ಬಿ.ಎನ್. ಚಂದ್ರಪ್ಪ ಎಂಬವರು ಚಾಲಿಸುತ್ತಿದ್ದ ಟಾಟಾ ಗೂಡ್ಸ್ ವಾಹನಕ್ಕೆ (ಕೆಎ 13 ಬಿ 8583) ಎದುರಿನಿಂದ ಬಂದ ಬೈಕ್ (ಕೆಎ 13 ಇಪಿ 4431) ಡಿಕ್ಕಿಯಾಗಿದ್ದು, ಪ್ರಕರಣ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಗೂಡ್ಸ್ ವಾಹನದ ಮುಂಭಾಗ ಜಖಂಗೊಂಡಿದೆ. ಬೈಕ್ ಚಾಲಕ ಬಸಪ್ಪ ಗಾಯಗೊಂಡಿದ್ದು, ಶನಿವಾರಸಂತೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.