ಕೂಡಿಗೆ, ನ. 15: ಕೂಡುಮಂಗಳೂರು ಮತ್ತು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮಕ್ಕಳಿಗೆ ಉಚಿತ ಗ್ರಂಥಾಲಯ ನೊಂದಣಿ ಅಭಿಯಾನ ಮೂಲಕ ಮಕ್ಕಳಲ್ಲಿ ಪುಸ್ತಕಗಳ ಜ್ಞಾನ ವೃದ್ಧಿಸುವ ಸಲುವಾಗಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮಕ್ಕಳನ್ನು ಗ್ರಂಥಾಲಯದಲ್ಲಿ ನೋಂದಾವಣಿ ಮಾಡಿಕೊಂಡು ಓದುವ ಅಭ್ಯಾಸವನ್ನು ರೂಪಿಸಿಕೊಳ್ಳಲು ಚಾಲನೆಯನ್ನು ನೀಡಲಾಯಿತು.

ಸರಕಾರದ ಹೊಸ ಯೋಜನೆಯಾದ ಓದಿನ ಬೆಳಕು ಎಂಬ ಯೋಜನೆಯ ಅಡಿಯಲ್ಲಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ. ಎಲ್ಲಾ ಮಕ್ಕಳನ್ನು ನೊಂದಣಿ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಯಿಷಾ ಚಾಲನೆ ನೀಡಿದರು.

ಮಕ್ಕಳ ಓದಿನ ಬೆಳಕು ಎಂಬ ಯೋಜನೆಯ ಮಾಹಿತಿಯನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಸಮಗ್ರವಾಗಿ ತಿಳಿಸಿದರು.

ಪೆÇೀಷÀಕರು ತಮ್ಮ ಮಕ್ಕಳನ್ನು ಗ್ರಂಥಾಲಯದಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುವುದರ ಮೂಲಕ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ತಮ್ಮ ಜ್ಞಾನ ಬೆಳವಣಿಗೆ ಸಹಕಾರಿಯಾಗುತ್ತದೆ ಎಂದು ಮಾಹಿತಿಯನ್ನು ತಿಳಿಸಿದರು. ಈ ಸಂದರ್ಭದಲ್ಲಿ ಕೂಡಿಗೆ ಗ್ರಂಥಾಲಯದ ಪಾಲಕಿ ಮಾದೇವಿ (ಕಾವ್ಯ) ಕಂದಾಯ ವಸೂಲಿಗಾರ ಅನೀಲ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.