*ಗೋಣಿಕೊಪ್ಪಲು, ನ. 15: ಗೋಣಿಕೊಪ್ಪಲು ಹಾಗೂ ಪೆÇನ್ನಂಪೇಟೆ ಅವಳಿ ನಗರಗಳಲ್ಲಿ ಭಿಕ್ಷುಕರ ಸಂಖ್ಯೆ ಅಧಿಕಗೊಳ್ಳುತ್ತಿದ್ದು, ಸುಂಟಿಕೊಪ್ಪದ ವಿಕಾಸ್ ಜನ ಸೇವಾ ಟ್ರಸ್ಟ್ ಸಹಕಾರದೊಂದಿಗೆ ಇಲ್ಲಿನ ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲಾಗುವದು ಎಂದು ಮಾನವ ಹಕ್ಕು ಸಮಿತಿ ಜಿಲ್ಲಾಧ್ಯಕ್ಷೆ ಪಡಿಕಲ್ ಕುಸುಮಾ ಚಂದ್ರಶೇಖರ್ ತಿಳಿಸಿದ್ದಾರೆ.

ಸುಂಟಿಕೊಪ್ಪದ ವಿಕಾಸ್ ಜನಸೇವಾ ಟ್ರಸ್ಟ್‍ನ ಅಧ್ಯಕ್ಷ ರಮೇಶ್ ಅವರನ್ನು ಸುಂಟಿಕೊಪ್ಪದಲ್ಲಿ ಭೇಟಿ ಮಾಡಿ, ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲು ಹಾಗೂ ಭಿಕ್ಷಾಟನೆ ನಿರ್ಮೂಲನಾ ಅಭಿಯಾನಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು. ಇದೇ ಸಂದರ್ಭ ಪೂರಕವಾಗಿ ಸ್ಪಂದಿಸಿದ ರಮೇಶ್, ಕೇಂದ್ರದಲ್ಲಿ ಸುಮಾರು 21 ಮಂದಿ ಆಶ್ರಯಪಡೆದಿದ್ದು, ಇನ್ನೂ 19 ಮಂದಿಗೆ ತಮ್ಮ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ನೀಡಲು ಅವಕಾಶವಿದೆ ಎಂದು ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಕುಸುಮಾ ಚಂದ್ರಶೇಖರ್, ಗೋಣಿಕೊಪ್ಪಲು ಗ್ರಾ.ಪಂ., ಪೆÇಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಗೋಣಿಕೊಪ್ಪಲು ಭಿಕ್ಷುಕರನ್ನು ಪತ್ತೆಹಚ್ಚಿ ಸುಂಟಿಕೊಪ್ಪಕ್ಕೆ ಕಳುಹಿಸಿಕೊಡಲಾಗುವದು ಎಂದರು. ಸುಂಟಿಕೊಪ್ಪ ವಿಕಾಸ್ ಜನ ಸೇವಾ ಟ್ರಸ್ಟ್ ಕಳೆದ 6 ವರ್ಷದಲ್ಲಿ ಸುಮಾರು 700ಕ್ಕೂ ಅಧಿಕ ನಿರಾಶ್ರಿತರಿಗೆ ಆಶ್ರಯ ನೀಡಿದೆ. ಸುಮಾರು 28 ಮಂದಿಗೆ ಉಚಿತ ನೇತ್ರ ಶಸ್ತ್ರ ಚಿಕಿತ್ಸೆಯನ್ನು ಮಡಿಕೇರಿ ಸ್ಮಿತಾ ಐ ಕೇರ್ ಸಹಕಾರದೊಂದಿಗೆ ಉಚಿತವಾಗಿ ನೆರವೇರಿಸಿ, ದೃಷ್ಠಿದೋಷ ನಿವಾರಣೆ ಮಾಡಲಾಗಿದೆ ಎಂದು ರಮೇಶ್ ತಿಳಿಸಿದರು.