ಚೆಟ್ಟಳ್ಳಿ, ನ. 15: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂಭಾಗದಲ್ಲಿ ಶುದ್ಧ ನೀರಿನ ಘಟಕವನ್ನು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮುಂದಾಳತ್ವದಲ್ಲಿ ಸರ್ವಧರ್ಮದ ಪ್ರಮುಖರಾದ ಚೆಟ್ಟಳ್ಳಿಯ ಯೋಗೇಶ್ ಭಟ್, ನೂರುದೀನ್ ಜುಹ್ರಿಖತೀಬ್, ಫಾದರ್ ಸ್ಟೀಫನ್ ಅಲೆಕ್ಸ್ ಉದ್ಘಾಟಿಸಿದರು.

ಕಾಫಿಯ ಗುಣಮಟ್ಟವನ್ನು ಪರೀಕ್ಷಿಸಲು ರೈತರಿಗೆ ಅನುಕೂಲವಾಗುವಂತೆ ಕಾಫಿ ಗುಣಮಟ್ಟ ಪರೀಕ್ಷಾ ಕೇಂದ್ರವನ್ನು ಕಾಫಿ ಬೆಳೆಗಾರರಾದ ಅಯ್ಯಂಡ್ರ ಸಿ ರಾಘವಯ್ಯ, ಬಿದ್ದಂಡ ಎ.ಅಚ್ಚಯ್ಯ, ಹೊಸಮನೆ ಟಿ. ಪೂವಯ್ಯ, ಸ್ಥಳೀಯ ವ್ಯಾಪಾರಿ ಇಸ್ಮಾಯಿಲ್ ಉದ್ಘಾಟಿಸಿದರು. ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ ಬೆಳೆಗಾರರು ತಾವು ಬೆಳೆದ ಕಾಫಿ ಹಾಗೂ ಕರಿಮೆಣಸಿನ ಗುಣಮಟ್ಟವನ್ನು ಸಂಘದಲ್ಲಿರುವ ಪರೀಕ್ಷಣಾ ಘಟಕದಲ್ಲಿ ಪರೀಕ್ಷಿಸಿಕೊಳ್ಳುವ ಮೂಲಕ ಕೇಂದ್ರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.

ಕಾರ್ಯಕ್ರಮದ ಅಂಗವಾಗಿ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಘದ ಮಾಜಿ ಉಪಾಧ್ಯಕ್ಷ ಹೆಚ್.ಎಸ್‍ತಿಮ್ಮಪಯ್ಯ, ಕಾಫಿ ಬೆಳೆಗಾರರಾದ ಚೇರಳತಮ್ಮಂಡ ಆನಂದ, ಪುತ್ತರಿರ ಕೆ.ದೇವಯ್ಯ, ಸಂಘದ ಮಾಜಿ ಕಾರ್ಯನಿರ್ವಹಣಾಧಿಕಾರಿ ಮುಳ್ಳಂಡ ಮಾಯಮ್ಮ, ಚೆಟ್ಟಳ್ಳಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಬಲ್ಲಾರಂಡ ಕಂಠಿಕಾರ್ಯಪ್ಪ, ಕಾಫಿ ಬೆಳೆಗಾರರಾದ ಮುಳ್ಳಂಡ.ಟಿ. ಚಂಗಪ್ಪ, ವಾಲ್ನೂರು ಪಂಚಾಯಿತಿಯ ಮಾಜಿ ಅಧ್ಯಕ್ಷ ಅಂಚೆಮನೆ ಸುಧಿ ಅತಿಥಿಗಳಾಗಿದ್ದರು.